ಮಲಿಯೂರು ಪ್ಯಾಕ್ಸ್ ಗೆ ಅವಿರೋಧ ಆಯ್ಕೆ

21tnpnewsfile01
ತಿ.ನರಸೀಪುರ ತಾಲೂಕಿನ ಮಲಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಆಯ್ಕೆಯಾದ ನೂತನ ಆಡಳಿತ ಮಂಡಳಿ ಸದಸ್ಯರನ್ನು ಗ್ರಾಮಸ್ಥರು ಅಭಿನಂದಿಸಿದರು.
Published on

ತಿ.ನರಸೀಪುರ: ತಾಲೂಕಿನ ಮಲಿಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಸ್ವಾಮಿ ಹಾಗೂ ಉಪಾಧ್ಯಕ್ಷರಾಗಿ ನಂಜಾಪುರ ಪುಟ್ಟಸಿದ್ದಮ್ಮ ಅವಿರೋಧವಾಗಿ ಆಯ್ಕೆಗೊಂಡರು.
ಗ್ರಾಮದ ಸಹಕಾರ ಸಂಘದ ಕಚೇರಿಯಲ್ಲಿ ಆಯೋಜಿಸಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಎಂ.ಸ್ವಾಮಿ ಪುಟ್ಟಸಿದ್ದಮ್ಮ ಅವರನ್ನು ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ಅವಿರೋಧ ಆಯ್ಕೆ ಪ್ರಕಟಿಸಿದರು.
ಅಧ್ಯಕ್ಷ ಎಂ.ಸ್ವಾಮಿ ಮಾತನಾಡಿ, ನೂತನ ಜವಾಬ್ದಾರಿಯನ್ನು ಸದಸ್ಯರ ಸಹಕಾರದೊಂದಿಗೆ ಯಶಸ್ವಿಯಾಗಿ ನಿಬಾಯಿಸುತ್ತೇನೆ. ಸಂಘದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದರ ಜತೆಗೆ ಸಹಕಾರಿಗಳಿಗೆ ಸರ್ಕಾರದಿಂದ ದೊರಕಬೇಕಾದ ಸೌಲಭ್ಯಗಳನ್ನು ದೊರಕಿಸಿಕೊಡಲು ಶ್ರಮಿಸಲಾಗುವುದು ಎಂದರು.
ಸಂಘದ ನಿರ್ದೇಶಕರಾಗಿ ಎಚ್.ಜವರಯ್ಯ, ಸಿದ್ದಯ್ಯ, ಎಂ.ಮಂಟೇಲಿಂಗಪ್ಪ, ದೊಳ್ಳಯ್ಯ, ಚಿಕ್ಕಮ್ಮ, ಬೀರಯ್ಯ, ಶಿವಣ್ಣ, ಎಂ.ಶಿವಕುಮಾರ್, ಕೆಂಪೇಗೌಡ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಬಾಬು ಜಗಜೀವನರಾಂ ಸಂಘದ ತಾಲೂಕು ಅಧ್ಯಕ್ಷ ಮಲಿಯೂರು ಡಿ. ಶಂಕರ್, ಗ್ರಾಮದ ಮುಖಂಡರಾದ ದೊಳ್ಳಯ್ಯ, ಯಜಮಾನ್ ಶಿವಣ್ಣ, ದೊಳ್ಳಯ್ಯ(ಮೆಡ್ಡಯ್ಯ), ಕೆಂಪ ಸಿದ್ದೇಗೌಡ, ನಾಗಪ್ಪ, ಗ್ರಾ.ಪಂ.ಮಾಜಿ ಸದಸ್ಯ ದೊಳ್ಳಯ್ಯ, ಎನ್.ಎಲ್.ಕೆಂಪಲಿಂಗಯ್ಯ, ಡಿ.ಎನ್.ಲಿಂಗಯ್ಯ, ಎನ್.ಎಲ್.ಬಸವರಾಜು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net