ಮರಳು ದ್ವೇಷಕ್ಕೆ ಓರ್ವ ಬಲಿ

Published on

ಮಂಗಳೂರು: ವೈಯುಕ್ತಿಕ ದ್ವೇಷದಿಂದ ತಂಡವೊಂದು ದಾಳಿ ನಡೆಸಿದ ಪರಿಣಾಮ ಓರ್ವ ಯುವಕ‌ ಮೃತಪಟ್ಟಿದ್ದು ಇಬ್ಬರು ಗಂಭೀರ ಸ್ಥಿತಿಯಲ್ಲಿ ಅಸ್ಪತ್ರೆಗೆ ದಾಖಲಾಗಿದ್ದಾರೆ.
ಕಟೀಲು ಸಮೀಪದ ಎಕ್ಕಾರು ದೇವರಗುಡ್ಡೆಯಲ್ಲಿ ಘಟನೆ ನಡೆದಿದೆ. ಮರಕಡ ನಿವಾಸಿ ಕೀರ್ತನ್(20) ಹತ್ಯೆಯಾದ ಯುವಕ. ನಿತಿನ್ ಹಾಗೂ‌ ಮನೇಶ್ ಗಾಯಗೊಂಡವರು.
ಅಕ್ರಮ ಮರಳುಗಾರಿಕೆಯ ದ್ವೇಷ ಹಿನ್ನಲೆಯಲ್ಲಿ ತಂಡವೊಂದು ತಲವಾರುಗಳೊಂದಿಗೆ ದಾಳಿ ನಡೆಸಿದೆ.
ಮಂಗಳೂರು ಬಜ್ಪೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net