ಮರಣ ಧೃಡೀಕರಣದಲ್ಲಿ ಅಕ್ರಮವೆಸಗಿದರೆ ಕ್ರಿಮಿನಲ್ ಮೊಕದ್ದಮೆ

ctd 5 DC--01
Published on


ಚಿತ್ರದುರ್ಗ: ಇ-ಜನ್ಮ ತಂತ್ರಾಂಶದಲ್ಲಿ 2015ರಿಂದ 2021ರವರೆಗೆ ಅವಧಿ ಮೀರಿ ನೋಂದಣಿಯಾಗದೇ ಉಳಿದಿರುವ 1879-ಜನನ ಹಾಗೂ 32 2-ಮರಣ ಪ್ರಕರಣಗಳನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ನೆರವಿನೊಂದಿಗೆ ವಿಶೇಷ ಅದಾಲತ್ ಮೂಲಕ ನೋಂದಾಯಿಸು ವ ಂತೆ ಜಿಲ್ಲಾಧಿಕಾರಿ ಜಿಆರ್‌ಜೆ ದಿವ್ಯಾಪ್ರಭು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಚೇರಿಯಲ್ಲಿ ಗುರುವಾರ ಜಿಲ್ಲಾ ಮಟ್ಟದ ನಾಗರಿಕ ನೋಂದಣಿ ಪದ್ಧತಿ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಆಯಾ ಆಸ್ಪತ್ರೆವಾರು ನೊಂದಣಿಯಾಗದಿರುವ ಪ್ರಕರಣಗಳ ಪಟ್ಟಿ ಸಿದ್ದಪಡಿಸಬೇಕು. ಪಾಲಕರನ್ನು ಅಗತ್ಯ ದಾಖಲೆಗಳೊಂದಿಗೆ ಅದಾಲ ತ್‌ಗೆ ಕರೆ ತರುವುದು ಆಸ್ಪತ್ರೆ ವೈದ್ಯಾಧಿ ಕಾರಿ,ನಗರ ಹಾಗೂ ಪುರಸಭೆ ಅಧಿಕಾರಿಗಳ ಕರ್ತವ್ಯವಾಗಿದೆ. ಜಿಲ್ಲಾಡಳಿತದಿಂದ ಪ್ರಾಧಿಕಾರಕ್ಕೆ ಪ್ರ ಕರಣಗಳ ತ್ವರಿತ ಇತ್ಯರ್ಥಕ್ಕೆ ಕೋರಿ ಮನವಿ ಮಾಡಲಾಗುವುದು ಎಂದರು.
ನೋಂದಣಿ ಗೌಪ್ಯತೆ ಕಾಪಾಡಿ
ಜನನ ಹಾಗೂ ಮರಣ ನೋಂದಣಿಗಳ ಗೌಪ್ಯತೆ ಕಾಪಾಡುವುದು ಅಧಿಕಾರಿಗಳ ಕರ್ತವ್ಯ. ಕೆಲ ಪ್ರಕರಣಗಳಲ್ಲಿ ಮರಣಕ್ಕೆ ಕಾರಣ ಬ ಹಿರಂಗವಾಗಿರುವುದು ಕಂಡುಬಂದಿದೆ. ಇದು ಕಾನೂನು ಬಾಹಿರವಾಗಿದ್ದು,ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಜರುಗಿಸಲಾಗುವುದು. ಸ್ಥಳೀಯ ತಂತ್ರಾಂಶದಲ್ಲಿ ಬೇರೆಡೆ ಮರಣ ಹೊಂದಿದವರ ವಿವರ ನಮೂದಿಸಿರುವುದೂ ಕಂಡುಬಂದಿದೆ. ಇದನ್ನು ಆಧರಿಸಿ ಮರಣ ಧೃ ಡೀಕರಣ ಪತ್ರವನ್ನೂ ವಿತರಿಸಲಾಗಿದೆ. ಆಸ್ತಿ ಹಂಚಿಕೆಯಲ್ಲಿ ಮುಖ್ಯವಾಗಿರುವ ಈ ಧೃಡೀಕರಣ ಪತ್ರದ ದುರ್ಬಳಕೆ ಸಾಧ್ಯತೆ ಹೆಚ್ಚಿರುತ್ತದೆ. ಇಂತಹ ಪ್ರಕರಣಗಳಲ್ಲಿ ಸಹಕರಿಸಿದ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡುವುದಾಗಿ ಡಿಸಿ ಎಚ್ಚರಿಸಿದರು.
ಅಧಿಕಾರಿ ನೇಮಕ
ನಾಡಕಚೇರಿಗಳಲ್ಲಿ ಜನನ-ಮರಣ ಧೃಡೀಕರಣ ನೀಡಲು ನಾಗರಿಕರಿಂದ ನೇರ ಹಣ ಪಡೆಯಲಾಗುತ್ತಿದೆ. ಇದನ್ನು ನಿಗದಿತ ದಿನಾಂ ಕದೊಳಗಾಗಿ ಸರ್ಕಾರಕ್ಕೆ ತುಂಬಬೇಕು. ಸರ್ಕಾರ ನಿಗದಿ ಪಡಿಸಿದ ಮೊತ್ತ ಪಡೆಯ ಬೇಕು. ಹೆಚ್ಚಿನ ಹಣ ಪಡೆಯುವುದು ಹಾಗೂ ಸಂಗ್ರ ಹಿಸಿದ ಹಣವನ್ನು ಪಾವತಿಸದೇ ಇರುವುದು ಕಂಡುಬಂದರೆ ಆಪರೇಟರ್‌ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈ ಸಂಬಂಧ ಪರಿಶೀ ಲಿಸಲು ಪ್ರತ್ಯೇಕ ಅಧಿಕಾರಿ ನೇಮಿಸಲಾಗುವುದೆಂದು ಡಿಸಿ ಹೇಳಿದರು.
ಪಿಡಿಒಗಳ ವ್ಯಾಪ್ತಿಗೆ
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳನ್ನು ಜನನ-ಮರಣ ನೋಂದಣಿ ಉಪ ನೋಂದಣಾಧಿಕಾರಿ ಎಂದು ಸರ್ಕಾರ ಆದೇಶಿಸಿದೆ. ಪಿಡಿ ಒಗಳು ತಮ್ಮ ವ್ಯಾಪ್ತಿಯ ಜನನ-ಮರಣಗಳ ನೋಂದಣಿಯನ್ನು ಕಡ್ಡಾಯವಾಗಿ 30 ದಿನದ ಒಳಗೆ ಪೂರ್ಣಗೊಳಿಸಬೇಕು.ನಂತರದ ಪ್ರಕರಣಗಳಲ್ಲಿ ಗ್ರಾಮ ಲೆಕ್ಕಾಧಿಕಾರಿ ಹಾಗೂ ತಹಸೀಲ್ದಾರ್ ಅವರಿಗೆ ಮರಣ ನೋಂದಣಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಡಿಸಿ ತಿಳಿಸಿ ದರು.
ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಹನುಮನಾಯ್ಕ ಮಾತನಾಡಿ,ಜಿಲ್ಲೆಯಲ್ಲಿ 1176 ಜನನ ನೋಂದಣಿ ಘಟಕಗಳಿವೆ. ಸಾಂಸ್ಥಿಕ ಹೆರಿ ಗೆಗಳು ಹೆಚ್ಚಾಗಿ ಆಗುತ್ತಿರುವುದರಿಂದ ಜನನ ನೋಂದಣಿಯಲ್ಲಿ ತೊಂದರೆ ಇಲ್ಲವೆಂದರು. ಉಪವಿಭಾಗಾಧಿಕಾರಿ ಎಂ.ಕಾರ್ತಿಕ್,ಸಹಾ ಯಕ ಅಂಕಿ ಸಂಖ್ಯೆ ಅಧಿಕಾರಿ ಅಶ್ವತ್ಥಾಮ ಮತ್ತಿತರರು ಇದ್ದರು.

(ಸಿಟಿಡಿ 20 ಡಿಸಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net