

ನಗರದ ಸರಸ್ವತಿಪುರಂ 14ನೇ ಮುಖ್ಯ ರಸ್ತೆಯಲ್ಲಿ ಶನಿವಾರ ದೊಡ್ಡ ಮರ ಒಂದು ಬಿದ್ದ ಪರಿಣಾಮ ತರಕಾರಿ ಗಾಡಿ ಸೇರಿದಂತೆ ಸ್ಕೂಟರ್, ಆಟೋ ರಿಕ್ಷಾಗಳು ಜಖಂಗೊಂಡಿವೆ. ತರಕಾರಿ ವ್ಯಾಪಾರಿ ಒಬ್ಬರು ಗಾಯಗೊಂಡಿದ್ದಾರೆ.
ಮರ ಬಿದ್ದು ಗಾಯಗೊಂಡ ತರಕಾರಿ ಮಾರಾಟ ಮಾರುತ್ತಿದ್ದ ಮಹದೇವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ತರಕಾರಿ ಗಾಡಿ, ಸ್ಕೂಟರ್ ಮತ್ತು ಎರಡು ಆಟೋ ರಿಕ್ಷಾಗಳು ಜಖಂಗೊಂಡವು.
ಪಾಲಿಕೆ ಅಧಿಕಾರಿಗಳು, ಅಭಯ ಸಿಬ್ಬಂದಿ, ಪೊಲೀಸರು ಸ್ಥಳಕ್ಕೆ ಆಗಮಿಸಿ ಮರ ತೆರವು ಮಾಡಲು ಮುಂದಾದರು. ಈ ವೇಳೆ ಸಾರ್ವಜನಿಕರು ಸ್ಥಳಕ್ಕೆ ಪಾಲಿಕೆ ಆಯುಕ್ತರು, ಅರಣ್ಯ ಇಲಾಖೆಯ ಅಧಿಕಾರಿಗಳು ಬರುವ ತನಕ ಮರ ತೆರವು ಮಾಡಬೇಡಿ ಎಂದು ಪಟ್ಟು ಹಿಡಿದರು. ಕೆಲ ಕಾಲ ವಾಗ್ವಾದವೂ ನಡೆಯಿತು.