

ಬೆಂಗಳೂರು: ಮಾವು ಬೆಳೆಗಾರರಿಗೆ ನೆರವಾಗುವ ಸಲುವಾಗಿ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಮತ್ತು ಅಂಚೆ ಇಲಾಖೆ ಹೊಸದೊಂದು ಪ್ರಯತ್ನಕ್ಕೆ ಮುಂದಾಗಿದ್ದು, ಮಾವುಪ್ರಿಯರು ಅಂಚೆ ಮೂಲಕ ಹಣ್ಣು ತರಿಸಿಕೊಳ್ಳುವ ವ್ಯವಸ್ಥೆ ಜಾರಿಗೆ ತರಲಾಗಿದೆ.
ಈ ವ್ಯವಸ್ಥೆಗೆ ಗುರುವಾರ ಚಾಲನೆ ನೀಡಲಾಗಿದ್ದು, ಬೆಳೆಗಾರರೇ ಮಾವಿನ ಹಣ್ಣುಗಳನ್ನು ಪ್ಯಾಕ್ ಮಾಡಿ ಅಂಚೆ ಸೇವಕರಿಗೆ ನೀಡಲಿದ್ದಾರೆ. ಆ ಪ್ಯಾಕ್ಗಳನ್ನು ಅಂಚೆ ಸೇವಕರು ಹಣ್ಣು ಬುಕ್ ಮಾಡಿದವರಿಗೆ ಅದೇ ದಿನ ಅಥವಾ ಮರುದಿನ ತಲುಪಿಸಲಿದ್ದಾರೆ.
ಪ್ರತಿ ಪ್ಯಾಕ್ 3 ಕೆ.ಜಿ. ಹೊಂದಿರಲಿದೆ. ರಸಪೂರಿ, ಬಾದಾಮಿ, ತೋತಾಪುರಿ, ಸೆಂದುರ ಹಣ್ಣುಗಳನ್ನು http://karsirimangoes.karnataka.gov.in ವೆಬ್ಸೈಟ್ನಲ್ಲಿ ಹೆಸರು, ವಿಳಾಸ ನೋಂದಣಿ ಮಾಡಿ ಖರೀದಿಸಬಹುದು.