ಮನೆ ಗೋಡೆ, ಛಾವಣಿ ಕುಸಿತ

17 Thyagarthi
ತ್ಯಾಗರ್ತಿ ಸಮೀಪದ ಮಳ್ಳಾ ಗ್ರಾಮದಲ್ಲಿ ಮಳೆಯಿಂದ ಮನೆಯ ಛಾವಣಿ ಕುಸಿತದ ಸ್ಥಳಕ್ಕೆ ಚಂದ್ರಪ್ಪ, ಸೋಮಶೇಖರ್, ಗಣಪತಿ, ಶ್ರೀನಿವಾಸಮೂರ್ತಿ ಭೇಟಿ ನೀಡಿದ್ದರು.
Published on

ತ್ಯಾಗರ್ತಿ: ಕಳೆದ ಎರಡು ದಿನಗಳಿಂದ ಸುರಿದ ಭಾರಿ ಗಾಳಿ ಮಳೆಯಿಂದಾಗಿ ಸಮೀಪದ ಮಳ್ಳಾ ಗ್ರಾಮದಲ್ಲಿ ಭಾನುವಾರ ಎರಡು ಮನೆಗಳ ಗೋಡೆ ಹಾಗೂ ಮೇಲ್ಛಾವಣಿ ಕುಸಿದಿದೆ. ಲಲಿತಮ್ಮ ನಾಗಪ್ಪ ಅವರ ಮನೆ ಗೋಡೆ ಹಾಗೂ ಮೇಲ್ಛಾವಣಿ ನೆಲಕಚ್ಚಿದೆ. ಅದೇ ಗ್ರಾಮದ ರಾಮಪ್ಪ ದಿವಾನಪ್ಪ ಎಂಬುವರ ಕೊಟ್ಟಿಗೆಯ ಮೇಲ್ಛಾವಣಿ ಕುಸಿದಿದೆ.

ಸ್ಥಳಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಸೆ ಚಂದ್ರಪ್ಪ, ತಾಪಂ ಮಾಜಿ ಸದಸ್ಯ ಸೋಮಶೇಖರ್ ಲಾವಿಗ್ಗೆರೆ, ನಗರಸಭೆ ಸದಸ್ಯ ಗಣಪತಿ ಮಂಡಗಳಲೆ, ಶಾಸಕರ ಆಪ್ತ ಸಹಾಯಕ ಶ್ರೀನಿವಾಸಮೂರ್ತಿ ಭೇಟಿ ನೀಡಿ ನೆರವು ನೀಡಿದ್ದಾರೆ. ಮಳೆಯಿಂದಾದ ನಷ್ಟಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ. ಪಿಡಿಒ ಶೇಖರಪ್ಪ, ಗ್ರಾಮ ಲೆಕ್ಕಿಗ ಫಕಿರೇಶ್, ಗ್ರಾಪಂ ಸದಸ್ಯ ಪ್ರಶಾಂತ್, ಮುಖಂಡರಾದ ಬೀರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net