ಮನೆ ಕಟ್ಟಲು ನೆರವು ನೀಡಿ

Published on

ಹುಬ್ಬಳ್ಳಿ: ನಗರದ ಗೋಕುಲ ರಸ್ತೆ ಲಿಡ್ಕರ್ ಕಾಲನಿಯಲ್ಲಿ ವಾಸಿಸುತ್ತಿರುವ ಸಮಗಾರ ಸಮಾಜದವರಿಗೆ ಮನೆ ಕಟ್ಟಲು ತಲಾ 10 ಲಕ್ಷ ರೂ. ಸಬ್ಸಿಡಿ ನೀಡಬೇಕು ಎಂದು ಡಾ. ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ಲಿಡ್ಕರ್ ನಿವಾಸಿಗಳ ಸಂಘ ಆಗ್ರಹಿಸಿದೆ.

ಶನಿವಾರ ಹುಬ್ಬಳ್ಳಿಗೆ ಆಗಮಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಂಘದ ಪದಾಧಿಕಾರಿಗಳು ಈ ಕುರಿತು ಮನವಿ ಸಲ್ಲಿಸಿದರು.

ಕಳೆದ 38 ವರ್ಷಗಳಿಂದ ಸಮಗಾರ ಸಮಾಜದವರು ಲಿಡ್ಕರ್ ಕಾಲನಿಯಲ್ಲಿ ಕಚ್ಚಾ ಮನೆಯಲ್ಲಿ ವಾಸಿಸುತ್ತಿದ್ದಾರೆ. ಸುಮಾರು ತಲಾ 20 ಲಕ್ಷ ರೂ. ವೆಚ್ಚದಲ್ಲಿ ಮನೆ ಕಟ್ಟಿಸಿಕೊಳ್ಳಲು 56 ಜನ ಉದ್ದೇಶಿಸಿದ್ದಾರೆ. 10 ಲಕ್ಷ ರೂ. ಬ್ಯಾಂಕ್ ಸಾಲ ಮಾಡಲು ನಿರ್ಣಯ ಮಾಡಿದ್ದಾರೆ. ಉಳಿದ 10 ಲಕ್ಷ ರೂ. ಹಣವನ್ನು ರಾಜ್ಯ ಸರ್ಕಾರವು ಸಬ್ಸಿಡಿ ರೂಪದಲ್ಲಿ ನೀಡಬೇಕು ಎಂದು ಸಂಘ ಕೋರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net