ಮನುಕುಲದ ಏಳಿಗೆಗೆ ದಾದಾಜೀ ಕೊಡುಗೆ ಅಪಾರ

19 bir 1 brahmakumari
ಬೀರೂರು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದಲ್ಲಿ ಸಂಸ್ಥಾಪಕ ದಾದಾ ಭಗವಾನ್ ಅವರ 56ನೇ ಪುಣ್ಯಸ್ಮರಣೆ ಆಚರಿಸಲಾಯಿತು. ಬ್ರಹ್ಮಕುಮಾರಿ ವಸಂತಕ್ಕ, ಪದ್ಮಕ್ಕ ಇತರರಿದ್ದರು.
Published on

ಬೀರೂರು: ಜನಕಲ್ಯಾಣದ ಉದ್ದೇಶ ಹೊಂದಿ ಮನುಕುಲದ ಸುಖ, ಶಾಂತಿಯ ಕನಸನ್ನು ಸಾಕಾರಗೊಳಿಸಲು ಅವತರಿಸಿದ ಪ್ರಜಾಪಿತ ಬ್ರಹ್ಮ ದಾದಾಜೀ (ಪೂರ್ವಾಶ್ರಮದ ದಾದಾ ಲೇಖರಾಜ) ಅವರ ಕೊಡುಗೆ ಅಪಾರ ಎಂದು ಪಟ್ಟಣದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಸಂಚಾಲಕಿ ವಸಂತಕ್ಕ ತಿಳಿಸಿದರು.

ಪಟ್ಟಣ ರಾಜಾಜಿನಗರ ಬಡಾವಣೆಯ ಈಶ್ವರೀಯ ವಿದ್ಯಾಲಯದಲ್ಲಿ ಶನಿವಾರ ದಾದಾ ಭಗವಾನ್ 56ನೇ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆತ್ಮಜ್ಞಾನಕ್ಕೆ ಹೆಚ್ಚಿನ ಮಹತ್ವ ನೀಡಿದ ದಾದಾ ಅವರು ಸರಳ ಮತ್ತು ಸಾಧನೆಗೆ ಪ್ರೇರಕವಾದ 18 ಜೀವನ ಮೌಲ್ಯಗಳನ್ನು ಬದುಕಿನ ಸಾರ್ಥಕತೆಗಾಗಿ ಅಳವಡಿಸಿಕೊಳ್ಳಲು ಪ್ರೇರೇಪಿಸಿದ ಮಹಾನ್ ಸಾಧಕರಾಗಿದ್ದಾರೆ ಎಂದರು.

ಬ್ರಹ್ಮಕುಮಾರಿ ಪದ್ಮಕ್ಕ ಮಾತನಾಡಿ, ಆಧ್ಯಾತ್ಮಿಕ ದೃಷ್ಟಿ ಮತ್ತು ಸರ್ವರ ಶುಭಚಿಂತಕರಾದ ದಾದಾ ಅವರು 1969ರಲ್ಲಿ ದೈಹಿಕ ಶರೀರ ತ್ಯಜಿಸಿದರು. ಅವರ ಅವ್ಯಕ್ತ ಶರೀರ ಸಹಯೋಗದಿಂದ ಇಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ಕೀರ್ತಿ 142 ದೇಶಗಳಲ್ಲಿ ಪಸರಿಸಿದೆ. ಸರ್ವರಲ್ಲೂ ಅಧ್ಯಾತ್ಮ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಅವರ 56ನೇ ಸಂಸ್ಮರಣೆ ನಮ್ಮ ಆಧ್ಯಾತ್ಮಿಕ ಅರಿವಿನ ಅಂತಃಶಕ್ತಿಯನ್ನು ಇನ್ನಷ್ಟು ಹೆಚ್ಚಿಸಲಿ ಎಂಬ ಆಶಯ ವ್ಯಕ್ತಪಡಿಸಿದರು.

ಬ್ರಹ್ಮಕುಮಾರಿ ಈಶ್ವರೀಯ ವಿದ್ಯಾಲಯದ ದಾಕ್ಷಾಯಣಮ್ಮ, ಲಿಂಗರಾಜಯ್ಯ, ಲಿಂಗಪ್ಪಣ್ಣ, ಮಲ್ಲಿಕಾರ್ಜುನ್, ಮಮತಾ, ರತ್ನಮ್ಮ, ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net