

ಚನ್ನರಾಯಪಟ್ಟಣ: ಧರ್ಮ ಸಂಸ್ಥಾಪನೆಯೊಂದಿಗೆ ಮನುಕುಲದ ಉದ್ಧಾರಕ್ಕಾಗಿ ಜನ್ಮವೆತ್ತಿದ ದೇವತಾ ಪುರುಷ ಶ್ರೀಕೃಷ್ಣ ಪರಮಾತ್ಮ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ಅಭಿಪ್ರಾಯಪಟ್ಟರು.
ಪಟ್ಟಣದ ತಾಲೂಕು ಆಡಳಿತಸೌಧದ ಆವರಣದಲ್ಲಿ ಬುಧವಾರ ತಾಲೂಕು ಆಡಳಿತ ವತಿಯಿಂದ ಆಯೋಜಿಸಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ಪರಮಾತ್ಮರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.
ಶ್ರೀಕೃಷ್ಣ ಪರಮಾತ್ಮ ದ್ವಾಪರಯುಗದಲ್ಲಿ ಹುಟ್ಟಿ ಭರತಖಂಡದಲ್ಲಿನ ಧರ್ಮರಾಜ್ಯಕ್ಕೆ ಕಾರಣವಾಗಿ ನ್ಯಾಯ, ಸಂಸ್ಕೃತಿಯ ಹುಟ್ಟಿಗೆ ಮುನ್ನುಡಿಯಿಟ್ಟ ಮಹಾಪುರುಷ. ಆತನನ್ನು ಇಂದಿಗೂ ಸಮಾಜ ಭಗವಂತನೆಂದು ಪೂಜಿಸುತ್ತಿದೆ. ಪ್ರತಿ ಹಳ್ಳಿಯಲ್ಲೂ ಮಹಾಭಾರತ, ಕುರುಕ್ಷೇತ್ರದ ನಾಟಕಗಳ ಮೂಲಕ ಶ್ರೀಕೃಷ್ಣ ಪರಮಾತ್ಮನ ಪರಿಚಯ ಪ್ರತಿ ಮನೆಗೆ ಆಗುತ್ತಿದೆ ಎಂದರು.
ಎಪಿಎಂಸಿ ಮಾಜಿ ಅಧ್ಯಕ್ಷ ವಳಗೇರಳ್ಳಿ ಮಂಜುನಾಥ್, ಗ್ರೇಡ್-2 ತಹಸೀಲ್ದಾರ್ ನಾಗರಾಜು, ಶಿರಸ್ತೇದಾರ್ ಪವನ್, ಕಸಬಾ ರಾಜಸ್ವ ನಿರೀಕ್ಷಕ ಮಂಜುನಾಥ್ ಇತರರು ಭಾಗವಹಿಸಿದ್ದರು.