ಮದ್ರಾಸ್ ವಿಶ್ವವಿದ್ಯಾಲಯಕ್ಕೆ ಚಾಂಪಿಯನ್ ಪಟ್ಟ

former cricketer
Published on

ಎಂ.ಎಸ್.ಐಶ್ವರ್ಯಾ(ಅಜೇಯ 42) ಭರ್ಜರಿ ಬ್ಯಾಟಿಂಗ್ ಹಾಗೂ ಶುಭಹಾರಿಣಿ(37 ರನ್, 13ಕ್ಕೆ 3) ಅವರ ಆಲ್‌ರೌಂಡ್ ನಿರ್ವಹಣೆಯ ನೆರವಿನಿಂದ ತಮಿಳುನಾಡಿನ ಮದ್ರಾಸ್ ವಿಶ್ವವಿದ್ಯಾಲಯ ತಂಡ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಮಹಿಳೆಯರ ಕ್ರಿಕೆಟ್ ಪಂದ್ಯಾವಳಿಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಮೈಸೂರು ವಿವಿ ವತಿಯಿಂದ ನಗರದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಬುಧವಾರ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ನಗರ ವಿವಿ ತಂಡದ ವಿರುದ್ಧ 8 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಬೆಂಗಳೂರು ನಗರ ವಿವಿ ತಂಡ, 25 ಓವರ್‌ಗಳಲ್ಲಿ 8 ವಿಕೆಟ್‌ಗೆ ಕೇವಲ 104 ರನ್ ಕಲೆಹಾಕಿತು. ಪ್ರತಿಯಾಗಿ ಮದ್ರಾಸ್ ವಿವಿ ತಂಡವು 16.2 ಓವರ್‌ಗಳಲ್ಲಿ 2 ವಿಕೆಟ್‌ಗೆ 108 ರನ್ ಪೇರಿಸುವ ಮೂಲಕ ಜಯ ದಾಖಲಿಸಿತು.

ಮೈಸೂರು ತಂಡಕ್ಕೆ ಸೋಲು: ಮೂರನೇ ಸ್ಥಾನಕ್ಕಾಗಿ ಎಸ್‌ಜೆಸಿಇ ಮೈದಾನದಲ್ಲಿ ಕ್ಯಾಲಿಕಟ್ ವಿವಿ ವಿರುದ್ಧ ನಡೆದ ಪಂದ್ಯದಲ್ಲಿ ಆತಿಥೇಯ ಮೈಸೂರು ವಿವಿ 80 ರನ್‌ಗಳಿಂದ ಸೋಲು ಅನುಭವಿಸಿತು. ಮೊದಲ ಬ್ಯಾಟಿಂಗ್ ಮಾಡಿದ ಕ್ಯಾಲಿಕಟ್ ವಿವಿ ನಿಗದಿತ 25 ಓವರ್‌ಗಳಲ್ಲಿ 3 ವಿಕೆಟ್‌ಗೆ 174 ರನ್ ದಾಖಲಿಸಿತು. ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಮೈಸೂರು ವಿವಿ ತಂಡ 21.5 ಓವರ್‌ಗಳಲ್ಲಿ 94 ರನ್ ಪೇರಿಸಿ ಸರ್ವಪತನ ಕಂಡಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net