ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

11sgr4 sridhar
ಶ್ರೀಧರಮೂರ್ತಿ
Published on

ಸಾಗರ: ತಾಲೂಕಿನಲ್ಲಿ ಅಕ್ರಮ ಮದ್ಯ ಮಾರಾಟ ವಿಪರೀತವಾಗಿದೆ. ಗ್ರಾಮೀಣ ಭಾಗದಲ್ಲಿ ಯುವಜನರನ್ನು ಕುಡಿತದ ದಾಸರನ್ನಾಗಿ ಮಾಡಲಾಗುತ್ತಿದೆ. ಅಕ್ರಮ ಮದ್ಯ ಮಾರಾಟ ತಡೆಯಲು ತಾಲೂಕು ಆಡಳಿತ ಸಂಪೂರ್ಣ ವಿಲವಾಗಿದೆ ಎಂದು ದೇಶಿ ಸೇವಾ ಬ್ರಿಗೇಡ್‌ನ ಶ್ರೀಧರಮೂರ್ತಿ ಹೇಳಿದರು.

ಕರೂರು ಭಾರಂಗಿ ಹೋಬಳಿ ಭಾಗದಲ್ಲಿ ಮದ್ಯ ಅಕ್ರಮ ಮಾರಾಟ ನಿರಂತರವಾಗಿ ನಡೆಯುತ್ತಿದೆ. ಬ್ಯಾಕೋಡು, ಬೆಳಮಕ್ಕಿ, ಸುಳ್ಳಳ್ಳಿ, ಕಾರಣಿ, ಕಟ್ಟಿನಕಾರು, ಎಸ್.ಎಸ್.ಭೋಗ್, ಬಿಳಿಗಾರು ಮತ್ತಿತರ ಕಡೆಗಳಲ್ಲಿ ಮನೆ, ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ನಡೆಯುತ್ತಿದೆ. ಅಬಕಾರಿ ಇಲಾಖೆ ನೆಪಮಾತ್ರಕ್ಕೆ ದಾಳಿ ನಡೆಸುತ್ತಿದೆಯೇ ಹೊರತು ಕಠಿಣ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕೂಡಲೇ ಕಡಿವಾಣ ಹಾಕದಿದ್ದರೆ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

ಅಕ್ರಮ ಮದ್ಯ ಮಾರಾಟ ತಡೆಯಲು ಎಲ್ಲ ಇಲಾಖೆಗಳು ವಿಲವಾಗಿವೆ. ಈ ಭಾಗಗಳಲ್ಲಿ ಮುಳುಗಡೆ ಸಂತ್ರಸ್ತರೇ ಹೆಚ್ಚಿದ್ದು ತಕ್ಷಣ ಮದ್ಯ ಅಕ್ರಮ ಮಾರಾಟ ನಿಲ್ಲಿಸಬೇಕು. ಕೂಲಿ ಕಾರ್ಮಿಕರು ದುಡಿದ ಹಣವನ್ನು ಮದ್ಯಸೇವನೆಗೆ ವ್ಯಯ ಮಾಡುತ್ತಿದ್ದಾರೆ. ಶಾಲಾ ಕಾಲೇಜು, ಹಾಸ್ಟೆಲ್ ಆವರಣಗಳಲ್ಲಿ ರಾಶಿರಾಶಿ ಬಾಟಲಿಗಳು ಬೀಳುತ್ತಿವೆ. ಇದು ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಹೇಳಿದರು. ಬ್ರಿಗೇಡ್‌ನ ಸುಳ್ಳಳ್ಳಿ ಶಾಖೆ ಅಧ್ಯಕ್ಷ ವಿಜಯಕುಮಾರ್ ಜೈನ್ ಮಾತನಾಡಿ, ಕರೂರು ಭಾರಂಗಿ ಹೋಬಳಿಯನ್ನು ಅಕ್ರಮ ಮದ್ಯ ಮಾರಾಟ ಜಾಲದಿಂದ ಹೊರಗೆ ತನ್ನಿ. ಇಲ್ಲವಾದಲ್ಲಿ ಇನ್ನಷ್ಟ್ಟು ಅನಾಹುತಗಳು ಹೋಬಳಿ ವ್ಯಾಪ್ತಿಯಲ್ಲಿ ನಡೆಯುತ್ತವೆ. ಮದ್ಯ ಮಾರಾಟ ಗ್ರಾಮಸ್ಥರಿಗೆ ಶಾಪವಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಡಾ. ರಾಜು, ಸುರೇಶ್, ಕಿರಣ್, ಪದ್ಮರಾಜ್, ಸದಾಶಿವ, ನಾಗರಾಜ್, ಬಂಗಾರಪ್ಪ, ಕೋದಂಡ, ರವಿಕುಮಾರ್, ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net