

ಅ.22ರಿಂದ ಒಲೆಕ್ಟ್ರಾ ಗ್ರೀನ್ ಟೆಕ್ ಕಂಪನಿಯ 12 ಮೀಟರ್ ಉದ್ದದ ಎಲೆಕ್ಟ್ರಿಕ್ ಬಸ್ ಪ್ರಾಯೋಗಿಕ ಸಂಚಾರ ಆರಂಭವಾಗಿದ್ದು, ಆಯ್ದ ಮಾರ್ಗಗಳಲ್ಲಿ ಮರಳು ಚೀಲಗಳನ್ನು ಹಾಕಿಕೊಂಡು ಕಾರ್ಯಾಚರಣೆ ಮಾಡಲಾಗುತ್ತಿದೆ. ಹದಿನೈದು ದಿನದ ಬಳಿಕ ಮರಳು ಚೀಲದ ಬದಲಾಗಿ ಪ್ರಯಾಣಿಕರನ್ನು ಕೂರಿಸಿಕೊಂಡು ಸಂಚಾರ ಮುಂದುವರಿಸಲು ನಿಗಮವು ಯೋಜಿಸಿದೆ. ಅದಕ್ಕಾಗಿ ಸಾರಿಗೆ ಇಲಾಖೆ ಅನುಮತಿ ಪಡೆಯಲು ನಿಗಮ ನಿರ್ಧರಿಸಿದೆ ಎಂದು ಬಿಎಂಟಿಸಿಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮರಳು ಮೂಟೆಗಳಿಂದ ಪರೀೆ:
ಇನ್ನೊಂದು ವಾರದಲ್ಲಿ ಸಂಸ್ಥೆಗಳು ಬಿಎಂಟಿಸಿಗೆ ಬಸ್ಗಳನ್ನು ನೀಡಲಿವೆ. ಅದಾದ ಎರಡ್ಮೂರು ದಿನಗಳಲ್ಲಿ ಬಸ್ಗಳ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ ನೀಡಲಾಗುತ್ತದೆ. ಪ್ರಾಯೋಗಿಕ ಸಂಚಾರದ ವೇಳೆ ಬಸ್ನ ವೇಗ, ತಾಂತ್ರಿಕತೆ, ಸೌಲಭ್ಯಗಳು ಸೇರಿ ಇನ್ನಿತರ ಅಂಶಗಳನ್ನು ಪರೀಕ್ಷಿಸಲಾಗುತ್ತದೆ.
10 ದಿನದಲ್ಲಿ ಮತ್ತೆರಡು ಬಸ್ಗಳು:
ಕೇಂದ್ರ ಸರ್ಕಾರದ ಫೇಮ್ ಇಂಡಿಯಾ 2ನೇ ಹಂತದ ಅನುದಾನ ಹಾಗೂ ರಾಜ್ಯ ಸರ್ಕಾರದ ಅನುದಾನ ಬಳಸಿಕೊಂಡು ಗುತ್ತಿಗೆ ಆಧಾರದಲ್ಲಿ 300 ಎಲೆಕ್ಟ್ರಿಕ್ ಬಸ್ ಪಡೆಯಲು ಬಿಎಂಟಿಸಿ ಮುಂದಾಗಿದೆ. ಅದಕ್ಕೆ ಸಂಬಂಧಿಸಿದಂತೆ ಟೆಂಡರ್ ಪ್ರಕ್ರಿಯೆಗೂ ಚಾಲನೆ ನೀಡಲಾಗಿದೆ. ಅದರಂತೆ ಟೆಂಡರ್ನಲ್ಲಿ ಪಾಲ್ಗೊಂಡಿದ್ದ ಒಲೆಕ್ಟ್ರಾ ಗ್ರೀನ್ ಟೆಕ್ ಸಂಸ್ಥೆ ಬಿಎಂಟಿಸಿ ಒಂದು ಬಸ್ ನೀಡಿದ್ದು, ಕಳೆದ ವಾರದಿಂದ ಆ ಬಸ್ ನಗರದಲ್ಲಿ ಪ್ರಾಯೋಗಿಕ ಸಂಚಾರ ಆರಂಭಿಸಿದೆ. ಅದರ ಜತೆಗೆ ಇದೀಗ ಜೆಬಿಎಂ ಮತ್ತು ವೀರ ವಾಹನ ಸಂಸ್ಥೆಗಳು ತಲಾ ಒಂದೊಂದು ಎಲೆಕ್ಟ್ರಿಕ್ ಬಸ್ಗಳನ್ನು ನಿಗಮಕ್ಕೆ ನೀಡಲು ಮುಂದೆ ಬಂದಿವೆ. ಆ ಬಸ್ಗಳನ್ನು ಪಡೆಯಲಿರುವ ಬಿಎಂಟಿಸಿ ನಗರದಲ್ಲಿ ಪ್ರಾಯೋಗಿಕ ಸಂಚಾರ ನಡೆಸಲು ನಿರ್ಧರಿಸಲಾಗಿದೆ.
ಬೆಂಗಳೂರು: ಬಿಎಂಟಿಸಿಯಿಂದ ಒಲೆಕ್ಟ್ರಾ ಸಂಸ್ಥೆಯ ಎಲೆಕ್ಟ್ರಿಕ್ ಬಸ್ ಸಂಚಾರಕ್ಕೆ ಚಾಲನೆ ನೀಡಿದ ಬೆನ್ನಲ್ಲೇ, ಇದೀಗ ಮತ್ತೆರಡು ಎಲೆಕ್ಟ್ರಿಕ್ ಬಸ್ಗಳ ಪ್ರಾಯೋಗಿಕ ಸಂಚಾರಕ್ಕೆ ಸಿದ್ಧತೆ ನಡೆಸಲಾಗಿದೆ.