ಮತಾಂತರ ಆರೋಪ ಐವರ ವಿರುದ್ಧ ದೂರು

Mathanthara
Published on

ಚಿತ್ರದುರ್ಗ: ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡುತ್ತಿದ್ದಾರೆ ಎಂಬುದಾಗಿ ಐವರ ವಿರುದ್ಧ ಚನ್ನಯ್ಯನಹಟ್ಟಿ ಗ್ರಾಮದ ಕಿರಣ್ ನಾಯ್ಕ್‌ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲಂಬಾಣಿ ಸಮುದಾಯವನ್ನೇ ಹೆಚ್ಚಾಗಿ ಗುರಿಯಾಗಿಸಿಕೊಂಡು ಸಮುದಾಯದವರನ್ನು ಕ್ರೈಸ್ತ ಧರ್ಮಕ್ಕೆ ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ.

ಗ್ರಾಮದಲ್ಲಿ ಕಳೆದ ಎರಡ್ಮೂರು ದಿನಗಳ ಹಿಂದೆ ಓಮಿನಿ ವ್ಯಾನ್‌ನಲ್ಲಿ ಬಂದ ಐವರು ಹಣದ ಆಮಿಷವೊಡ್ಡಿ, ಗ್ರಾಮಸ್ಥರನ್ನು ಕ್ರೈಸ್ತ ಧರ್ಮದ ಪುಸ್ತಕಗಳನ್ನು ನೀಡಿ ಮತಾಂತರ ಮಾಡಲು ಯತ್ನಿಸುತ್ತಿದ್ದಾರೆ ಎಂಬ ದೂರಿನ ಮೇರೆಗೆ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಐವರನ್ನು ವಿಚಾರಣೆ ನಡೆಸಿದ್ದು, ನೋಟಿಸ್ ನೀಡಿ ಬಿಡುಗಡೆಗೊಳಿಸಿದ್ದಾರೆ. ವಿಚಾರಣೆಗೆ ಕರೆದಾಗ ಬರುವಂತೆಯೂ ಸೂಚಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net