ಮತ ಮಾರಿಕೊಳ್ಳುವವರಿಂದ ದಿಕ್ಕು ತಪ್ಪಿದೆ ಸಂವಿಧಾನದ ಆಶಯ

IMG-20250127-WA0126
ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಆಯೋಜಸಿದ್ದ 76ನೇ ಸಂವಿಧಾನ ದಿನಾಚರಣೆಯ ವಜ್ರಮಹೋತ್ಸವ ರಾಜ್ಯಮಟ್ಟದ ಸಮಾವೇಶವನ್ದನು ಗಣ್ಯರು ಉದ್ಘಾಟಿಸಿದರು.
Published on

ಹೊಳೆನರಸೀಪುರ : ಮತದಾನದ ಹಕ್ಕು ಪಡೆದವರು ಅದರ ಮಹತ್ವ ಅರಿತಾಗ ಮಾತ್ರ ಅಂಬೇಡ್ಕರ್ ಸಂವಿಧಾನ ಸಂಪೂರ್ಣ ಜಾರಿಯಾಗುತ್ತದೆ ಎಂದು ಮೈಸೂರಿನ ಉರಿಲಿಂಗ ಪೆದ್ದಿಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ತಿಳಿಸಿದರು.

ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ ಭಾನುವಾರ ಸಾರ್ವಜನಿಕ ಸಮುದಾಯ ಭವನದಲ್ಲಿ ಆಯೋಜಿಸಿದ್ದ 76ನೇ ಸಂವಿಧಾನ ದಿನಾಚರಣೆಯ ವಜ್ರ ಮಹೋತ್ಸವ ಹಾಗೂ ರಾಜ್ಯ ಮಟ್ಟದ ಸಮಾವೇಶದಲ್ಲಿ ಮಾತನಾಡಿದ ಅವರು, ನಾನು ಬರೆದುಕೊಟ್ಟ ಸಂವಿಧಾನ ಜಾರಿ ಮಾಡುವ ಸ್ಥಾನವನ್ನು ನನ್ನ ಜನ ಅಲಂಕರಿಸಬೇಕು. ಆಗ ಮಾತ್ರ ಸಂವಿಧಾನದ ಅಶಯ ಸಾರ್ಥಕವಾಗುತ್ತದೆ ಎಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಆದರೆ ಓಟಿಗಾಗಿ ಮತ ಮಾರಿಕೊಳ್ಳುವವರಿಂದ ಸಂವಿಧಾನದ ಆಶಯ ದಿಕ್ಕು ತಪ್ಪಿದೆ ಎಂದರು.

ಅಂಬೇಡ್ಕರ್ ಅಂದರೆ ಮೆರವಣಿಗೆಯಲ್ಲ, ಬರವಣಿಗೆ. ಅಂಬೇಡ್ಕರ್ ಅಂದರೆ ಪುತ್ಥಳಿಯಲ್ಲ, ಪುಸ್ತಕ ಎನ್ನುವ ಮೂಲಕ ಅವರಿಂದ ಸಾಮಾಜಿಕ ನ್ಯಾಯ ಕಂಡುಕೊಂಡಿರುವ ನಾವು ಅವರ ಮಾರ್ಗದರ್ಶನವನ್ನು ಪಾಲಿಸಬೇಕಿದೆ. ವಿದೇಶಿಗರು ಅಂಬೇಡ್ಕರ್‌ರ ಜ್ಞಾನವನ್ನು ಗೌರವಿಸಿದರು. ಆದರೆ ನಮ್ಮ ದೇಶದ ಮಹನೀಯರು ಎನಿಸಿಕೊಂಡವರು ಅವರನ್ನು ಕಡೆಗಣಿಸಿದ್ದರು. ಆದರೂ ಜ್ಞಾನಕ್ಕೆ ಮಿಗಿಲಾದ್ದು ಯಾವುದೂ ಇಲ್ಲ ಎನ್ನುವುದನ್ನು ಅಂಬೇಡ್ಕರ್ ಸಾಧಿಸಿ ತೋರಿಸಿಕೊಟ್ಟಿದ್ದಾರೆ ಎಂದರು.

ಧ್ವಜವನ್ನು ಅನುಮೋದಿಸಿದ್ದು ಡಾ.ಬಿ.ಆರ್.ಅಂಬೇಡ್ಕರ್. ಆದರೆ ಅದೇ ಧ್ವಜವನ್ನು ಸಂಸತ್ ಭವನದ ಮೇಲೆ ಹಾರಿಸುವಾಗ ಕೇಂದ್ರ ಗೃಹಸಚಿವ ಅಮಿತ್‌ಷಾ ಅವರಿಗೆ ಅಂಬೇಡ್ಕರ್ ಮಹತ್ವದ ಅರಿವಿಲ್ಲ. ಬದಲಿಗೆ ಅಂಬೇಡ್ಕರ್ ಎಂಬುದು ಫ್ಯಾಷನ್ ಎಂದು ಅದೇ ಸಂಸತ್ ಭವನದಲ್ಲಿ ಅಪಮಾನ ಮಾಡಿದರು. ರಾಜದಂಡ ಹಿಡಿದು ಪುರೋಹಿತರಿಂದ ಸಂಸತ್ ನೂತನ ಭವನ ಉದ್ಘಾಟನೆ ಮಾಡಿದರು. ಆದರೆ ಸಂವಿಧಾನ ಬದ್ಧವಾಗಿ ರಾಷ್ಟ್ರಪತಿಗಳಿಂದ ಸಂಸತ್ ಭವನ ಉದ್ಘಾಟಿಸಬೇಕೆಂಬ ನಿಯಮ ಮರೆತರು ಎಂದು ಜರಿದರು.

ಸಂಸದ ಶ್ರೇಯಸ್ ಎಂ.ಪಟೇಲ್, ನಟ ಚೇತನ್, ದಸಂಸ ರಾಜ್ಯ ಸಂಚಾಲಕ ಎಂ.ಸೋಮಶೇಖರ್, ರಾಜ್ಯದ ಎಲ್ಲ ಜಿಲ್ಲೆ ಹಾಗೂ ತಾಲೂಕುಗಳಿಂದ ದಲಿತ ಸಂಘರ್ಷ ಸಮಿತಿ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net