ಮಣಿಪುರ ಘಟನೆ ವಿರುದ್ಧ ಆಕ್ರೋಶ

1HDK04
ಎಚ್.ಡಿ.ಕೋಟೆಯ ತಾಲೂಕು ಆಡಳಿತ ಸೌಧ ಆವರಣದಲ್ಲಿ ಕ್ರೈಸ್ತ ಹಾಗೂ ಅಲ್ಪಸಂಖ್ಯಾತ ಸಮುದಾಯ ವತಿಯಿಂದ ಪ್ರತಿಭಟನೆ ನಡೆಯಿತು.
Published on

ಎಚ್.ಡಿ.ಕೋಟೆ: ಮಣಿಪುರ ರಾಜ್ಯದಲ್ಲಿ ಮಹಿಳೆಯರನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿರುವುದು ಸರಿಯಲ್ಲ ಎಂದು ಆರೋಪಿಸಿ ಕೋಟೆ ಮತ್ತು ಸರಗೂರು ತಾಲೂಕಿನ ಕ್ರೈಸ್ತ ಹಾಗೂ ಅಲ್ಪಸಂಖ್ಯಾತ ಸಮುದಾಯ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.

ಪಟ್ಟಣದ ಆಡಳಿತ ಸೌಧ ಮುಂಭಾಗ ಪ್ರತಿಭಟನೆ ನಡೆಸಿದ ಬಳಿಕ ತಹಸೀಲ್ದಾರ್ ಸಣ್ಣರಾಮಪ್ಪ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.ಇದಕ್ಕೂ ಮುನ್ನ ಪ್ರತಿಭಟನಾಕಾರರು ಪಟ್ಟಣದ ಅಂಬೇಡ್ಕರ್ ಭವನದ ಆವರಣದಿಂದ ಮೆರವಣಿಗೆ ಹೊರಟು ಪ್ರಮುಖ ಬೀದಿಯಲ್ಲಿ ಸಾಗಿ ತಾಲೂಕು ಆಡಳಿತ ಸೌಧ ಆವರಣದಲ್ಲಿ ಸಮಾವೇಶಗೊಂಡರು.

ಕ್ರೈಸ್ತ ಸಮುದಾಯದ ಅಧ್ಯಕ್ಷ ಜೈ ಕುಮಾರ್ ದುಬಾಲ ಮಾತನಾಡಿ, ದೇಶ ಕಾಯುವ ಯೋಧ ತನ್ನ ಪತ್ನಿಯನ್ನು ರಕ್ಷಿಸಿಕೊಳ್ಳಲು ಆಗುತ್ತಿಲ್ಲ. ಹಾಗಾಗಿ ಇಂತಹ ಘಟನೆಗಳಿಗೆ ಮುಕ್ತಿ ನೀಡುವುದರ ಜತೆಗೆ ಇದಕ್ಕೆ ಕುಮಕ್ಕು ಕೊಡುತ್ತಿರುವ ಎಲ್ಲರನ್ನೂ ಬಂಧಿಸಬೇಕು ಎಂದು ಒತ್ತಾಯಿಸಿದರು.

ರಾಷ್ಟ್ರಪತಿಗಳು ಕೂಡಲೇ ಮಧ್ಯಪ್ರವೇಶಿಸಿ ಸರ್ಕಾರವನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಮಲ್ಲಿಕಾರ್ಜುನ್, ಲೋಕೇಶ್, ಚಂದ್ರು, ಡೇವಿಡ್, ಮುನಿರತ್ನ, ಬಸವರಾಜು, ಜೋಸೆಫ್, ಪ್ರೇಮ್‌ಕುಮಾರ್, ದಾನಿಯಲ್, ಸುರೇಶ್, ಅನುಷಾ, ಶೈಲಾಸುಧಾಮಣಿ, ದೇವದಾಸ್, ಜಾಯ್ ಪ್ರಿಯದರ್ಶಿನಿ, ಶಿವಮ್ಮ, ಒಲಿಬಿಯಾ ಕ್ರೇಜಿ, ಚಂದ್ರು, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net