ಮಟ್ಟೆಣ್ಣವರ್ ಮಹತ್ವದ ನಿರ್ಧಾರ ಪ್ರಕಟ

Published on

ಯಾದಗಿರಿ: ಗುರಮಠಕಲ್ ಕ್ಷೇತ್ರಕ್ಕೆ ಅಭ್ಯರ್ಥಿ ಲಲಿತಾ ಅನಪುರ ಆಯ್ಕೆ ಕುರಿತಂತೆ ಸಾಕಷ್ಟು ಅಸಮಾಧಾನ ಎದ್ದಿರುವುದು ಸಾಮಾನ್ಯ. ಆದರೆ ನಾನು ಯಾವುದೇ ಕಾರಣಕ್ಕೂ ಬಂಡಾಯ ಏಳುವುದು ಹಾಗೂ ಪಕ್ಷ ವಿರೋಧಿ ಚಟುವಟಿಕೆ ಮಾಡುವುದಿಲ್ಲ ಎಂದು ಕಾಡಾ ಮಾಜಿ ಅದ್ಯಕ್ಷ ಗಿರೀಶ ಮಟ್ಟೆಣ್ಣವರ್ ಸ್ಪಷ್ಟಪಡಿಸಿದರು.

ಕೋವಿಡ್ ಸಂದರ್ಭದಲ್ಲಿ ಎಷ್ಟೋ ಜನ ಉಸಿರಾಗಿ ಹೋರಾಟ ನಡೆಸಿದ್ದಾರೆ. ಆದರೆ, ಇಂದು ಟಿಕೆಟ್ ಸಿಗದಿದ್ದರೆ ಯಾರ ಉಸಿರು ನಿಲ್ಲುವುದಿಲ್ಲ. ಮಾಜಿ ಪ್ರಧಾನಿ ದಿ.ಅಟಲ್ ಬಿಹಾರಿ ವಾಜುಪೇಯಿ ಹಾಕಿದ ಹೆಜ್ಜೆಯಲ್ಲಿ ನಾವು ಸಾಗುತ್ತಿದ್ದೇವೆ. ಗುರಮಠಕಲ್ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಬಗ್ಗೆ ನಮ್ಮಲ್ಲಿರುವ ಅಸಮಾಧಾನವನ್ನು ಹೊರ ಹಾಕದೆ ಅಭ್ಯರ್ಥಿ ಪರ ಕೆಲಸ ಮಾಡುತ್ತೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಘೋಷಿಸಿದರು.

ರಾಜ್ಯದ 224 ಕ್ಷೇತ್ರದಲ್ಲಿ ಎಲ್ಲೆಲ್ಲಿ ಬಿಜೆಪಿ ವೀಕ್ ಇದೆಯೋ ಅಲ್ಲಿ ಪಕ್ಷ ಸೂಚನೆ ನೀಡಿದರೆ ನಾನೇ ಸ್ವತಃ ಹೋಗಿ ಪ್ರಚಾರ ಮಾಡಲು ಸಿದ್ದ. ಪಕ್ಷದ ರಾಷ್ಟ್ರೀಯ ನಾಯಕರು ತೆಗೆದುಕೊಂಡ‌‌ ಕೆಲ‌ ನಿರ್ಧಾರಕ್ಕೆ ನಾವೆಲ್ಲ‌ ಬದ್ಧರಾಗಬೇಕಾಗುತ್ತದೆ. ಗಿರೀಶ್ ಮಟ್ಟಣ್ಣವರ್ ವ್ಯವಸ್ಥೆ ವಿರುದ್ಧ ಸಿಡಿದೇಳುವುದಿಲ್ಲ. ಜನತೆಗೆ ಅನ್ಯಾಯವಾದಾಗ ಬಂಡಾಯ ಎದ್ದಿದ್ದೇನೆ. ಅಭ್ಯರ್ಥಿ ಲಲಿತಾ ಅನಪುರ ಪರ ಕೆಲಸ ಮಾಡುತ್ತೇನೆ ಎಂದು ಪ್ರಕಟಿಸಿದರು.
ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ವಿರುದ್ಧ ಕ್ಷೇತ್ರದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಚುನಾವಣೆ ವೇಳೆ ಪಕ್ಷಾಂತರ ಮಾಡಿ, ಜನರ ಮುಂದೆ ಕಣ್ಣೀರು ಹಾಕುತ್ತಿದ್ದಾರೆ. ಜನ‌ ಸದ್ಯ ಜಾಗೃರಾಗಿದ್ದಾರೆ. ಯಾರು, ಯಾವಾಗ ಹೇಗೆ ಬದಲಾಗುತ್ತಾರೆ ಎಂಬುದನ್ನು ಸೂಕ್ಷ್ಮವಾಗಿ ಬಲ್ಲವರಾಗಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net