ಮಕ್ಕಳು, ಮಿಸ್ ಹಾಗೂ ಮಿಸಸ್ ಕರ್ನಾಟಕ- 2025 ಫ್ಯಾಷನ್ ಶೋ

5
Published on

ಗಾನವಿ ಕಂಬೈನ್ಸ್ ಆಶ್ರಯದಲ್ಲಿ ಮಕ್ಕಳು, ಮಿಸ್ ಹಾಗೂ ಮಿಸಸ್ ಕರ್ನಾಟಕ- 2025 ಫ್ಯಾಷನ್ ಶೋ ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಜರುಗಿತು.

ಪ್ಯಾಷನ್ ಶೋ ಸಂಘಟಕಿ ಪಿ.ಎನ್. ಶೋಭಾರಾಣಿ ಮಾತನಾಡಿ, ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಈ ಫ್ಯಾಷನ್ ಶೋ ಏರ್ಪಡಿಸಲಾಗಿದೆ. ಮಹಿಳೆಯರು ಕೇವಲ ಮನೆಗೆ ಸೀಮಿತವಾಗಬಾರದು. ಅವರಿಗೂ ಅವಕಾಶಗಳು ಸಿಗಬೇಕು ಎಂಬ ಉದ್ದೇಶ ನಮ್ಮದು ಎಂದರು.

ಸಾಮಾನ್ಯವಾಗಿ ಕೆಲವರು ಮಹಿಳೆಯರ ಕಾಲೆಳೆಯಲು ಯತ್ನಿಸುತ್ತಾರೆ. ಅದನ್ನು ನಾವು ಆಶೀರ್ವಾದ ಎಂದು ತಿಳಿದುಕೊಂಡು ಮುಂದೆ ಸಾಗಿ, ಸಾಧಿಸಬೇಕು. ಆ ಮೂಲಕವೇ ಅವರಿಗೆ ಉತ್ತರ ನೀಡಬೇಕು. ಅಂತಹ ಆತ್ಮವಿಶ್ವಾಸವನ್ನು ಸ್ಪರ್ಧೆಗಳು ನೀಡುತ್ತವೆ ಎಂದರು.

ಬೆಂಗಳೂರು ಎಸ್ಪಿ ಜಿತೇಂದ್ರ ಕಣವಿ ಮಾತನಾಡಿ, ಫ್ಯಾಷನ್ ಶೋ ಎಂದರೇ ಮೂಗು ಮುರಿಯುವ ಕಾಲವಿತ್ತು. ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಪಾಶ್ಚಾತ್ಯರಿಗೆ ಸೀಮಿತವಾಗಿದ್ದ ಫ್ಯಾಷನ್ ಶೋ ಈಗ ನಮ್ಮಲ್ಲೂ ಜನಪ್ರಿಯವಾಗಿದೆ. ಮಕ್ಕಳು, ಯುವತಿಯರು, ಮಹಿಳೆಯರು ಈ ಅವಕಾಶವನ್ನು ಸದುಪಯೋಗ ಮಾಡಿಕೊಂಡು ಈ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದು ಅವರು ಸಲಹೆ ಮಾಡಿದರು.

ಅಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಡೈರೆಕ್ಟರ್ ನಾಗರಾಜ ವಿ. ಬೈರಿ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿದರು. ಬೀದರ್‌ನ ಕರ್ನಾಟಕ ಪಶುವೈದ್ಯ ಮತ್ತು ಮೀನುಗಾರಿಕೆ ವಿವಿ ಎಸ್ಟೇಟ್ ಅಧಿಕಾರಿ ಡಾ.ರಾಮಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net