ಮಕ್ಕಳಿಗೆ ಶಿಕ್ಷಣ ಬಲ ಅತ್ಯಗತ್ಯ

HUN-SEP-24-1(SHIKSHAKARA PATTINA SAHAKARA SANGHA)
ಹುಣಸೂರು ನಗರದ ಗುರುಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶಾಸಕ ಎಚ್.ಪಿ.ಮಂಜುನಾಥ್ ಉದ್ಘಾಟಿಸಿದರು. ಪ್ರದೀಪ್ ಈಶ್ವರ್, ಎಸ್,ರೇವಣ್ಣ, ಮಹದೇವ್, ಕೌಸಲ್ಯಾ ಇದ್ದರು.
Published on


ಶಾಸಕ ಎಚ್.ಪಿ.ಮಂಜುನಾಥ್ ಅಭಿಮತ


ಹುಣಸೂರು: ವಿದ್ಯಾರ್ಥಿಗಳಿಗೆ ಆರ್ಥಿಕ ಬಲಕ್ಕಿಂತ ಶಿಕ್ಷಣ ಬಲ ಇಂದಿನ ಅಗತ್ಯವಾಗಿದೆ ಎಂದು ಶಾಸಕ ಎಚ್.ಪಿ.ಮಂಜುನಾಥ್ ಅಭಿಪ್ರಾಯಪಟ್ಟರು.


ನಗರದ ಗುರುಭವನದಲ್ಲಿ ಶನಿವಾರ ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ಹಾಗೂ ಪರಿಶ್ರಮ ನೀಟ್ ಅಕಾಡೆಮಿ ಸಹಯೋಗದಲ್ಲಿ ಆಯೋಜಿಸಿದ್ದ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆ, ಶೈಕ್ಷಣಿಕ ಉಪನ್ಯಾಸ ಮತ್ತು ಸಾವಿತ್ರಿಬಾಯಿ ಫುಲೆ ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.


ವಿದ್ಯಾರ್ಥಿಯನ್ನು ತಿದ್ದಿತೀಡಿ ಜೀವನ ರೂಪಿಸುವ ಶಿಕ್ಷಕರು ಯಾವುದೇ ನೋವಿನಲ್ಲಿ ಇರಬಾರದು. ತಾಲೂಕಿನಲ್ಲಿ 15 ವರ್ಷಗಳಿಂದ ನಾನು ಅಧಿಕಾರಿದಲ್ಲಿದ್ದು, ಶಿಕ್ಷಕರ ನೋವಿಗೆ ಸ್ಪಂದಿಸಿದ್ದೇನೆ. ಶಿಕ್ಷಕರ ಮನಸ್ಸು ಸಮಾಧಾನದಿಂದ ಇದ್ದರೆ ಮಾತ್ರ ವಿದ್ಯಾರ್ಥಿಗಳಿಗೆ ಉತ್ತಮವಾಗಿ ಕಲಿಸಲು ಸಾಧ್ಯ ಎಂದರು.


ಹಣ, ಅಂತಸ್ತಿಗಿಂತ ಶಿಕ್ಷಣದ ಬಲದಿಂದ ವಿದ್ಯಾರ್ಥಿಗಳು ಜೀವನ ರೂಪಿಸಿಕೊಳ್ಳಬಹುದು. ಇಂತಹ ವಿದ್ಯಾರ್ಥಿಗಳನ್ನು ರೂಪಿಸುವ ಶಿಕ್ಷಕರು ನೆಮ್ಮದಿಯಿಂದ ಇರಬೇಕು. ಪರಿಶ್ರಮ ಅಕಾಡೆಮಿ ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಗೆ ಗುಣಮಟ್ಟದ ತರಬೇತಿ ನೀಡುವ ಮೂಲಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.


ಪರಿಶ್ರಮ ನೀಟ್ ಅಕಾಡೆಮಿ ಸಂಸ್ಥಾಪಕ ಪ್ರದೀಪ್ ಈಶ್ವರ್, ತಮ್ಮ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆಯನ್ನು ಎದುರಿಸಲು ನೀಡುವ ತರಬೇತಿ ಕುರಿತು ಮತ್ತು ಶಿಕ್ಷಕರಿಗೆ ವಿದ್ಯಾರ್ಥಿಗಳೊಂದಿಗೆ ಇರಬೇಕಾದ ಒಡನಾಟದ ಕುರಿತು ಮಾಹಿತಿ ನೀಡಿದರು.


ಸಾವಿತ್ರಿಬಾಯಿ ಫುಲೆ ಭಾವಚಿತ್ರ ಅನಾವರಣಗೊಳಿಸಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ರೇವಣ್ಣ ಮಾತನಾಡಿದರು. ಕ್ಷೇತ್ರ ಸಮನ್ವಯಾಧಿಕಾರ ಕೆ.ಸಂತೋಷ್‌ಕುಮಾರ್, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಎಲ್.ರಾಜೇಂದ್ರ, ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಹದೇವ್, ಸರ್ಕಾರಿ ನೌಕರರ ಸಂಘದ ತಾಲುಕು ಅಧ್ಯಕ್ಷ ಗೋವಿಂದೇಗೌಡ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ, ಪಿಇಒ ಎಚ್.ಎಸ್.ಲೋಕೇಶ್, ಸಾವಿತ್ರಿಬಾಯಿ ಫುಲೆ ಸಂಘದ ಅಧ್ಯಕ್ಷೆ ಕೌಸಲ್ಯಾ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net