ಮಕ್ಕಳಿಗೆ ಮಾರ್ಗದರ್ಶನಕ್ಕಾಗಿ ಶಾಲೆ ತೆರೆಯಲು ಸಿದ್ಧತೆ

India-fails-to-educate-its-school-children1
Published on

ಬೆಂಗಳೂರು: ಮಕ್ಕಳು ಮಾರ್ಗದರ್ಶನ ಪಡೆಯಲು ಅವಕಾಶ ಕಲ್ಪಿಸುವುದಕ್ಕಾಗಿ ಶಾಲಾ- ಕಾಲೇಜುಗಳನ್ನು ತೆರೆಯಲು ಆಡಳಿತ ಮಂಡಳಿ ಸಕಲ ಸಿದ್ಧತೆಯಲ್ಲಿ ತೊಡಗಿವೆ.
ನಗರದಲ್ಲಿರುವ ಪ್ರತಿಷ್ಠಿತ ಶಾಲಾ-ಕಾಲೇಜುಗಳು ಹಲವು ತಿಂಗಳ ನಂತರ ವಿದ್ಯಾರ್ಥಿಗಳಿಗಾಗಿ ಬಾಗಿಲುಗಳನ್ನು ತೆರೆಯುತ್ತಿವೆ. ವಸತಿ ಶಾಲಾ-ಕಾಲೇಜು, ಮತ್ತಿತರ ಪ್ರತಿಷ್ಠಿತ ಶಾಲಾ -ಕಾಲೇಜುಗಳು ವಿದ್ಯಾರ್ಥಿಗಳ ಪ್ರವೇಶಕ್ಕೆ ಕರೊನಾ ಪರೀಕ್ಷೆ ಪ್ರಮಾಣ ಪತ್ರ ಕಡ್ಡಾಯ ಮಾಡಿವೆ.
ಇದು ಹಲವು ವಿದ್ಯಾರ್ಥಿಗಳು ಮತ್ತು ಪಾಲಕರಿಗೆ ತಲೆ ನೋವಿನ ಸಂಗತಿಯಾಗಿ ಪರಿಣಮಿಸಿದೆ.
ಇದರ ಹೊರತಾಗಿ ಶಾಲೆಗಳಿಗೆ ಪಾಲಕರು ಆಗಮಿಸುವಾಗ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಸ್ಯಾನಿಟೈಸರ್ ಬಳಕೆ ಮಾಡುವುದು ಕಡ್ಡಾಯವಾಗಿದೆ.
ಕೇಂದ್ರ ಸರ್ಕಾರ ಸೆ.21ರಿಂದ 9ನೇ ತರಗತಿ 12ನೇ ತರಗತಿಯ ವಿದ್ಯಾರ್ಥಿಗಳು ತರಗತಿಗಳಿಗೆ ತೆರಳಿ ಮಾರ್ಗದರ್ಶನ ಪಡೆದುಕೊಳ್ಳವುದಕ್ಕೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಶಾಲಾ-ಕಾಲೇಜುಗಳು ಸಿದ್ಧತೆ ಮಾಡಿಕೊಳ್ಳುತ್ತಿವೆ.
ಶಿಕ್ಷಕರಿಗೆ ಬುಲಾವ್: ಇಷ್ಟು ದಿನ ಆನ್‌ಲೈನ್ ತರಗತಿಯಲ್ಲೇ ನಿರತರಾಗಿದ್ದ ಶಿಕ್ಷಕರನ್ನು ಶಾಲೆಗೆ ಬರುವಂತೆ ಆಡಳಿತ ಮಂಡಳಿಗಳು ಸೂಚನೆ ನೀಡಿವೆ. ಕೇಂದ್ರ ಸರ್ಕಾರ 9ರಿಂದ 12ನೇ ತರಗತಿಗೆ ಮಾತ್ರ ಅವಕಾಶ ನೀಡಿದ್ದರೂ ಶಾಲಾ ಆಡಳಿತ ಮಂಡಳಿಯು ಪ್ರಾಥಮಿಕದಿಂದ ಪ್ರೌಢಶಾಲೆಯವರೆಗೆ ಎಲ್ಲ ಶಿಕ್ಷಕರನ್ನು ಶಾಲೆ ಬರಹೇಳಿದೆ. ಬಹುಶಃ ಇನ್ನು ಮುಂದೆ ಶಿಕ್ಷಕರು ಶಾಲೆಗಳಿಗೆ ತೆರಳಿ ಆನ್‌ಲೈನ್ ತರಗತಿ ಆರಂಭಿಸುವ ಸಾಧ್ಯತೆ ಹೆಚ್ಚಿದೆ.
ಸಿದ್ಧರಾಗದ ಪಾಲಕರು: ಅನ್‌ಲಾಕ್ ಪ್ರಕ್ರಿಯೆ ಚಾಲ್ತಿಯಲ್ಲಿದ್ದರೂ ಮನೆಯಿಂದ ಹೊರಗೆ ಮಕ್ಕಳನ್ನು ಕಳುಹಿಸಲು ಪಾಲಕರು ಎದುರುತ್ತಿದ್ದಾರೆ. ಶೇ.95 ಪಾಲಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಇಷ್ಟವಿಲ್ಲವೆಂದು ಹೇಳಿರುವುದು ಖಾಸಗಿ ಶಾಲೆಯೊಂದು ನಡೆಸಿದ ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಕೇವಲ ಸರ್ಕಾರದ ನಿಯಮ ಪಾಲಿಸುವ ಉದ್ದೇಶದಿಂದಷ್ಟೇ ನಾವು ಶಾಲೆ ತೆರೆಯಬೇಕಿದೆ. ವಿದ್ಯಾರ್ಥಿಗಳು ಮತ್ತು ಪಾಲಕರು ಬರುವ ಸಾಧ್ಯತೆಯೇ ಕಮ್ಮಿ ಎಂದು ದೆಹಲಿ ಪಬ್ಲಿಕ್ ಶಾಲೆಯ ಆಡಳಿತ ಮಂಡಳಿ ಸದಸ್ಯ ಮನ್ಸೂರ್ ಖಾನ್ ತಿಳಿಸಿದ್ದಾರೆ.

ಅನುಕೂಲಗಳೇನು?

  • ಶಾಲೆಗೆ ತೆರಳಿ ಮಾಹಿತಿ ಪಡೆಯುವುದರಿಂದ ಚೆನ್ನಾಗಿ ಆರ್ಥವಾಗಬಹುದು
  • ಹಲವು ದಿನಗಳ ನಂತರ ಶಾಲೆಗೆ ಹೋದ ಖುಷಿ ಸಿಗಬಹುದು
  • ಸ್ನೇಹಿತರನ್ನು ಭೇಟಿ ಮಾಡಲು ಇದೊಂದು ಅವಕಾಶ
  • ಹೊಸ ಅನುಭವ ವಿದ್ಯಾರ್ಥಿಗಳಿಗೆ ಸಿಗಲಿದೆ
  • ಶಿಕ್ಷಕರಿಗೂ ವಿದ್ಯಾರ್ಥಿಗಳನ್ನು ನೋಡುವ ಅವಕಾಶ

ಆನಾನುಕೂಲಗಳೇನು?

  • ಕರೊನಾ ಪರೀಕ್ಷೆ ಪ್ರಮಾಣ ಪತ್ರ ಕಷ್ಟ
  • ಮಕ್ಕಳಿಗೆ ಸುರಕ್ಷತೆ ಅರಿವು ಮೂಡಿಸಿ ಕಳುಹಿಸಬೇಕು
  • ಪ್ರತ್ಯೇಕ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು
  • ಕರೊನಾ ಸೋಂಕು ತಗಲುವ ಭಯ
  • ಮಕ್ಕಳು ಹೋಮ್ ಸಿಕ್‌ನಿಂದ ಹೊರ ಬರುವುದು ಕಷ್ಟ

ಡಿ.ಶಶಿಕುಮಾರ್, ಕ್ಯಾಮ್ಸ್ ಸಂಘಟನೆ

ನಾವು ಶಾಲೆಗಳನ್ನು ತೆರೆಯಲು ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ, ಯಾವ ರೀತಿಯಲ್ಲಿ ವಿದ್ಯಾರ್ಥಿಗಳನ್ನು ಪಾಲಕರನ್ನು ಶಾಲೆಗೆ ಬರ ಮಾಡಿಕೊಳ್ಳಬೇಕು ಎಂಬ ಬಗ್ಗೆ ಇನ್ನೂ ಎಸ್‌ಒಪಿ ರಾಜ್ಯ ಸರ್ಕಾರದಿಂದ ಬಂದಿಲ್ಲ. ಇದಕ್ಕಾಗಿ ಕಾಯುತ್ತಿದ್ದೇವೆ.

ಕೋಟ್..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net