

ಬೆಟ್ಟದಪುರ: ಗ್ರಾಮೀಣ ಪ್ರದೇಶದ ಮಕ್ಕಳಿಗೆ ಓದುವ ಆಸಕ್ತಿ ಬೆಳೆಸಲು ಗ್ರಾಮ ಪಂಚಾಯಿತಿ ಗ್ರಂಥಾಲಯವು ಮಹತ್ವದ ಪಾತ್ರ ವಹಿಸುತ್ತದೆ ಎಂದು ಬೆಟ್ಟದಪುರ ಗ್ರಾ.ಪಂ. ಪಿಡಿಒ ದಿವಾಕರ್ ಅಭಿಪ್ರಾಯಪಟ್ಟರು.
ಬೆಟ್ಟದಪುರ ಗ್ರಾಮ ಪಂಚಾಯತಿಯ ಗ್ರಂಥಾಲಯ ಕಚೇರಿಯಲ್ಲಿ ಆಯೋಜಿಸಿದ್ದ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿ, ಹಲವಾರು ಕಾರಣಗಳಿಂದ ಗ್ರಾಮಾಂತರ ಭಾಗದಲ್ಲಿ ಮಕ್ಕಳಿಗೆ ಓದುವ ಕೌಶಲ್ಯ ಕುಂಠಿತವಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನವನ್ನು ಗ್ರಂಥಾಲಯಗಳ ಮೂಲಕ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಸೌಮ್ಯ, ಸದಸ್ಯರಾದ ಗಿರಿಗೌಡ, ಈಶ್ವರಚಾರಿ, ಶಿಲ್ಪಶ್ರೀ, ವೀಣಾ, ಇಕ್ಬಾಲ್, ಗ್ರಂಥಾಲಯದ ಮೇಲ್ವಿಚಾರಕ ಎಚ್.ಎಂ ಮೈಲಾರಿ, ಸಿಬ್ಬಂದಿ ಅಣ್ಣಯ್ಯ, ಶ್ರೀನಿಧಿ, ದೀಪು ಇದ್ದರು.