ಮಕ್ಕಳ ಮಡಿಲಿಗೆ ವೃದ್ಧ ದಂಪತಿ

27 bir 1 elders
ಮಕ್ಕಳಿಂದ ಬೇಸತ್ತು ಕೆ.ಆರ್.ಪೇಟೆಯ ಮಾತೃಭೂಮಿ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿದ್ದ ವೃದ್ಧ ದಂಪತಿಯನ್ನು ಮರಳಿ ಮಕ್ಕಳ ಮಡಿಲಿಗೆ ಸೇರಿಸುವಲ್ಲಿ ಸಮಾಜಸೇವಕ ಟಿ.ಜಿ.ಮಂಜುನಾಥ್ ಹಾಗೂ ಪಿಎಸ್‌ಐ ಬಸವರಾಜ್ ಬಿರೇದಾರ್ ಯಶಸ್ವಿಯಾದರು.
Published on

ಬೀರೂರು: ಮಕ್ಕಳ ಬೇಜವಾಬ್ದಾರಿತನದಿಂದ ವೃದ್ಧಾಶ್ರಮಕ್ಕೆ ಸೇರಿಸಲ್ಪಟ್ಟಿದ್ದ ವೃದ್ಧ ದಂಪತಿಯನ್ನು ಮತ್ತೆ ತಮ್ಮ ಮಕ್ಕಳ ಮಡಿಲಿಗೆ ಸೇರಿಸುವಲ್ಲಿ ಸಮಾಜ ಸೇವಕ ಟಿ.ಜಿ.ಮಂಜುನಾಥ್ ಹಾಗೂ ಪುರಸಭೆ ಮಾಜಿ ಅಧ್ಯಕ್ಷೆ ಸವಿತಾ ರಮೇಶ್ ಯಶಸ್ವಿಯಾಗಿದ್ದಾರೆ.

ಕಳೆದ ನಾಲ್ಕು ತಿಂಗಳ ಹಿಂದೆ ಹಾವೇರಿ ಜಿಲ್ಲೆಯ ಗುತ್ತಲ ಗ್ರಾಮದಿಂದ ವೃದ್ಧ ದಂಪತಿ ರಾಜಪ್ಪ ಮತ್ತು ದೇವಿಕಮ್ಮ ಮಕ್ಕಳ ವರ್ತನೆಯಿಂದ ಮನನೊಂದು ಊರನ್ನು ತೊರೆದಿದ್ದರು. ಅವರು ಎಲ್ಲಿಗೆ ಹೋಗಬೇಕೆಂಬುದು ತಿಳಿಯದೆ ಬೀರೂರು ಪಟ್ಟಣದ ಹಿರಿಯಂಗಳ ರಸ್ತೆಯ ಶಿವಕುಮಾರ್ ದಂಪತಿ ಮನೆಯಲ್ಲಿ ಆಶ್ರಯ ಪಡೆದಿದ್ದರು.

ಅಡಕೆ ಕೊಯ್ಲು ಸಮಯವಾದ್ದರಿಂದ ಅಲ್ಲಿಯೆ ತಮ್ಮ ಕೈಲಾಗುವ ಕೆಲಸಗಳನ್ನು ಮಾಡುತ್ತಿದ್ದರು. ಅಡಕೆ ಕೊಯ್ಲು ಮುಗಿದ ನಂತರ ಅವರನ್ನು ಕೆ.ಆರ್.ಪೇಟೆಯ ಮಾತೃಭೂಮಿ ವೃದ್ಧಾಶ್ರಮಕ್ಕೆ ಕಳುಹಿಸಿಕೊಡಲಾಗಿತ್ತು. ಈ ದಂಪತಿಯ ಸಂಪೂರ್ಣ ಮಾಹಿತಿ ಸಂಗ್ರಹಿಸಿದ ಮಂಜುನಾಥ್ ಗುತ್ತಲ ಪೊಲೀಸ್ ಠಾಣೆಯ ಪಿಎಸ್‌ಐ ಬಸವರಾಜ್ ಬಿರೇದಾರ್ ಅವರಿಗೆ ಮಾಹಿತಿ ನೀಡಿದ್ದರು. ವೃದ್ಧ ದಂಪತಿಯ ಹೊರ ಹಾಕಿದ ಮಕ್ಕಳ ಮನವೊಲಿಸಿ ಪುನಃ ಅವರನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆ ಪಡೆದು ಅವರ ಮಡಿಲಿಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಜುನಾಥ ಮಾತನಾಡಿ, ಇಳಿ ವಯಸ್ಸಿನಲ್ಲಿ ಮಕ್ಕಳು ತಂದೆ ತಾಯಿ ಹಾಗೂ ಪಾಲಕರನ್ನು ನಿರ್ಲಕ್ಷಿಸುತ್ತಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿಯಾಗಿದೆ. ಮಕ್ಕಳು ಪಾಲಕರ ಬಗ್ಗೆ ಕಾಳಜಿವಹಿಸಬೇಕಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net