ಮಕ್ಕಳ ಪ್ರತಿಭೆಗೆ ಪ್ರೇರೇಣೆ ನೀಡಲಿ

13NGD1
ನಂಜನಗೂಡಿನ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ಪ್ರೌಢಶಾಲೆ ವಿಭಾಗ ಮಟ್ಟದ ಕಲೋತ್ಸವ ಕಾರ್ಯಕ್ರಮವನ್ನು ಶಿವಲಿಂಗಯ್ಯ ಉದ್ಘಾಟಿಸಿದರು. ಸತೀಶ್, ಎಸ್.ದಳವಾಯಿ, ವಸಂತಕುಮಾರ್, ವೀರಭದ್ರು, ಬಾಲಸರಸ್ವತಿ ಇತರರು ಇದ್ದರು.
Published on

ನಂಜನಗೂಡು: ಮಕ್ಕಳ ಪ್ರತಿಭೆಯನ್ನು ಪ್ರೇರೇಪಿಸಿ ಜಿಲ್ಲೆ, ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರತಿನಿಧಿಸುವಂತೆ ಶಿಕ್ಷಕರು ರೂಪಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಲಿಂಗಯ್ಯ ಹೇಳಿದರು.


ಪಟ್ಟಣದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಬುಧವಾರ ಕಸಬಾ ಹೋಬಳಿ ಪ್ರೌಢಶಾಲೆ ವಿಭಾಗ ಮಟ್ಟದ ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ವಿಜ್ಞಾನ ಹಾಗೂ ತಂತ್ರಜ್ಞಾನ ಬೆಳವಣಿಗೆ ಜತೆಯಲ್ಲೇ ನಾಡಿನ ಪಾರಂಪರಿಕ ಕಲೆ, ಸಂಗೀತ, ನೃತ್ಯ ಹಾಗೂ ಇತರ ಸಾಂಸ್ಕೃತಿಕ ಕಲೆಗಳಲ್ಲೂ ಮಕ್ಕಳು ಪರಿಣಿತರಾಗಬೇಕು ಎಂದು ತಿಳಿಸಿದರು.


ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಸತೀಶ್ ಎಸ್.ದಳವಾಯಿ, ಹಳೆಯ ವಿದ್ಯಾರ್ಥಿ ಸಂಘದ ಪ್ರತಿನಿಧಿ ವಸಂತಕುಮಾರ್, ಪ್ರೌಢಶಾಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವೀರಭದ್ರು, ಉಪ ಪ್ರಾಂಶುಪಾಲರಾದ ಬಾಲಸರಸ್ವತಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net