

ಬೆಳಗಾವಿ: ವರ್ಗಾವಣೆ ವಿಚಾರದಲ್ಲಿ ಕೆಲವೊಂದು ಸಲ ಸಮಸ್ಯೆ ಆಗುತ್ತದೆ. ಮಂತ್ರಿಗಳ ಕೋಟಾ ಇತಿಮಿತಿ, ಕಾನೂನು ರ್ನಿಬಂಧ ಇರುತ್ತದೆ. ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಿರುತ್ತದೆ.
ಎಲ್ಲವನ್ನೂ ಅಂತಿಮವಾಗಿ ಮುಖ್ಯಮಂತ್ರಿ ಪರಿಹರಿಸುತ್ತಾರೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ಖಾನಾಪುರದಲ್ಲಿ ಮಂಗಳವಾರ "ಸಚಿವರು ಶಾಸಕರಿಗೆ ಸ್ಪಂದನೆ ಮಾಡುತ್ತಿಲ್ಲ ಎಂದು ಶಾಸಕರು ಪತ್ರ ಬರೆದಿರುವ' ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲರ ಕಾರ್ಯಕ್ಷಮತೆಯೂ ಒಂದೇ ಇರಲ್ಲ. ಒಬ್ಬರು ವೇಗವಾಗಿ ಮತ್ತೊಬ್ಬರು ನಿಧಾನವಾಗಿ ಕಾರ್ಯನಿರ್ವಹಿಸುತ್ತಾರೆ.
ಈ ವ್ಯತ್ಯಾಸ ಸಮಸ್ಯೆಯಾಗಿರಬಹುದು. ಈವರೆಗೂ ಯಾರು ಏನು ಎಂದು ಗೊತ್ತಿಲ್ಲ. ಗುರುವಾರ ಶಾಸಕಾಂಗ ಸಭೆ ಇದೆ, ಅಲ್ಲಿ ವಿಷಯ ಚರ್ಚೆ ಆಗಬಹುದು ಅಲ್ಲಿವರೆಗೆ ನೋಡೋಣ ಎಂದರು.