ಮಂಗಳೂರು: ಬೀದರ್ ಮತ್ತು ತೆಲಂಗಾಣದಿಂದ ಗಾಂಜಾ ತಂದು ಮಂಗಳೂರು ಪರಿಸರದಲ್ಲಿ ಮಾರಾಟಕ್ಕೆ ಯತ್ನಿಸಿದ 44.630 ಕಿ.ಗ್ರಾಂ ಗಾಂಜಾ ಪತ್ತೆ ಮಾಡಿ ಒಟ್ಟು ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಅಜೀಜ್,ಹಫೀಸ್,ವಿಠಲ ಚೌಹಾನ್, ಸಂಜು ಕುಮಾರ್, ಕಲ್ಲಪ್ಪ, ಮೊಹಮ್ಮದ್ ಹಫೀಜ್,ಸಂದೀಪ್ ಬಂಧಿತರು. ಕಾರು, ಬೈಕ್ ಸಮೇತ ಒಟ್ಟು 23.25 ಲಕ್ಷ ರೂ.ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.