ಮಂಗಳೂರು ಕೊರಗಜ್ಜ ಕ್ಷೇತ್ರ ಮಾಲಿನ್ಯ ಮಾಡಿದ ಓರ್ವನ ಸಾವು ಇಬ್ಬರಿಂದ ತಪ್ಪು ಕಾಣಿಕೆ

Published on

ಮಂಗಳೂರು: ನಗರದ ಎಮ್ಮೆಕೆರೆಯಲ್ಲಿರುವ ಕೊರಗಜ್ಜನ ಕ್ಷೇತ್ರವನ್ನು ಮೂತ್ರ ಮಾಡಿ ಗಲೀಜು ಮಾಡಿದ್ದಲ್ಲದ್ದೆ ಲಕ್ಷಾಂತರ ಕೊರಗಜ್ಜನ ಭಕ್ತರಿಗೆ ನೋವುಂಟು ಮಾಡಿದ ಆರೋಪಿಗಳಿಗೆ ಕಾರಣಿಕ ಶಕ್ತಿ ಕೊರಗಜ್ಜನ ಮಹಿಮೆ ಅರಿವಾಗಿದ್ದು ಓರ್ವ ಹುಚ್ಚು ಹಿಡಿದು ಸಾವನ್ನಪ್ಪಿದ್ದರೆ,ಉಳಿದಿಬ್ಬರು ಪ್ರಾಣ ಭೀತಿಯಿಂದ ಬುಧವಾರ ಕ್ಷೇತ್ರದಲ್ಲಿ ಕೋಲ ನಡೆಯುವ ಸಂದರ್ಭ ಆಗಮಿಸಿ ಕೊರಗಜ್ಜನ ಮುಂದೆ ತಪ್ಪು ಕೇಳಿದ್ದಾರೆ. ಇನ್ನೋರ್ವ ಅಸೌಖ್ಯದಿಂದ ತಪ್ಪು ಕೇಳುವ ಕಾರ್ಯದಿಂದ ದೂರ ಉಳಿದಿದ್ದಾನೆ.
ಕಳೆದ ತಿಂಗಳು ಈ ಘಟನೆ ನಡೆದಿತ್ತು. ಬಳಿಕ ಹಿಂದೂ ಸಂಘಟನೆಗಳು ಕಾಲ್ನಡಿಗೆ ಜಾಥಾ ಸಹಿತ ಹಲವು ಕಾರ್ಯಕ್ರಮ ಹಮ್ಮಿಕೊಂಡು ಕ್ಷೇತ್ರಕ್ಕೆ ಅಪಚಾರ ಮಾಡಿದವರಿಗೆ ತಕ್ಕ ಶಾಸ್ತಿಯಾಗಲಿ ಎಂದು ಹರಕೆ ,ದೂರುಸಲ್ಲಿಸಿದರು. ಓರ್ವ ಮೂರ್ನಾಲ್ಕು ದಿನಗಳ ಹಿಂದೆ ಮನೆಯಲ್ಲಿಯೇ ತಲೆಯನ್ನು ಗೋಡೆಗೆ ಬಡಿದುಕೊಂಡು ಮೃತಪಟ್ಟಿದ್ದಾನೆ.ಇದೀಗ ಕ್ಷೇತ್ರದ ಕಾರಣಿಕ ಗೋಚರಿಸಿದ್ದು ದೈವದ ಮುಂದೆ ಕ್ಷಮಾಪಣೆಗೆ ಮುಂದಾಗಿದ್ದಾರೆ. ಅಂದಾಜು 25-35ರ ಹರೆಯದ ಯುವಕರೇ ಗಲಬೆ ಸೃಷ್ಟಿಸುವ ಉದ್ದೇಶ ಇಲ್ಲವೇ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಉದ್ದೇಶದಿಂದ
ಬೇರೆ ಕೋಮಿನ ಒಟ್ಟು ಹದಿಮೂರು ಜನರ ತಂಡ ಕೊರಗಜ್ಜ ಕ್ಷೇತ್ರ ಅಪವಿತ್ರಗೊಳಿಸುವ
ಈ ಕೃತ್ಯ ಎಸಗಿರುವುದು ಕಂಡು ಬಂದಿದ್ದು,ಕ್ಷಮಾಪಣೆ ಆದ ಕೂಡಲೇ ಪೊಲೀಸರ ತಂಡ ಆರೋಪಿಗಳನ್ನು ವಶಕ್ಕೆ ಪಡೆದಿದೆ.ಸ್ಥಳದಲ್ಲಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net