ಮಂಗಳೂರಲ್ಲಿ ಲಷ್ಕರ್ ಇ ತೊಯ್ಬಾ ಜಿಂದಾಬಾದ್ ಗೋಡೆ ಬರಹ

Published on

.

ಮಂಗಳೂರು: ಇಲ್ಲಿನ ಸರ್ಕ್ಯೂಟ್ ಹೌಸ್ ಬಳಿಯ ಕಂಪೌಂಡ್ ನಲ್ಲಿ ಲಷ್ಕರ್ ಇ ತೊಯ್ಬಾ ಜಿಂದಾಬಾದ್ ಗೋಡೆಬರಹ ಶುಕ್ರವಾರ ಬೆಳಗ್ಗೆ ಕಂಡು ಬಂದಿದೆ.

ಲಷ್ಕರ್ ಉಗ್ರರನ್ನ ಕರೆಸುವುದಾಗಿ ಬೆದರಿಕೆಯ ಬರಹವನ್ನು ಗುರುವಾರ ತಡರಾತ್ರಿ ಬರೆದಿದ್ದಾರೆ. ಕದ್ರಿ ಪೊಲೀಸ್ ಠಾಣೆಯ ಕೂಗಳತೆ ದೂರದಲ್ಲಿರುವ ಸರ್ಕ್ಯೂಟ್ ಹೌಸ್ ಆವರಣದಲ್ಲಿ ಈ ಬರಹ ಕಂಡು ಬಂದಿರುವುದು ಆಶ್ಚರ್ಯ ಮೂಡಿಸಿದೆ.

ಪೊಲೀಸರು ಭೇಟಿ ನೀಡಿ ವಿವಾದಾತ್ಮಕ ಬರಹವನ್ನು ಅಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net