ವಿಜಯವಾಣಿ ಸುದ್ದಿಜಾಲ ಕೋಲಾರ
ಜಿಲ್ಲೆಯಾದ್ಯಂತ ತುಂತುರು ಹಾಗೂ ಜಡಿ ಮಳೆ ಮಂಗಳವಾರವೂ ಮುಂದುವರೆದಿದ್ದು, ಹವಾಮಾನ ಇಲಾಖೆಯ ಪ್ರಕಾರ ಬುಧವಾರವೂ ಮುಂದುವರೆಯಲಿದೆ ಎಂದು ಸೂಚನೆ ನೀಡಿದೆ.
ಸೋಮವಾರ ಪ್ರಾರಂಭವಾದ ತುಂತುರು ಹಾಗೂ ಜಡಿ ಮಳೆ ಮಂಗಳವಾರವೂ ಮುಂದುವರೆದಿತ್ತು. ಶಾಲಾ ಕಾಲೇಜುಗಳಿಗೆ ದಸರಾ ರಜೆ ನೀಡಿರುವ ಕಾರಣ ಜಡಿ ಮಳೆಯಿಂದ ವಿದ್ಯಾರ್ಥಿಗಳಿಗೆ ತೊಂದರೆ ಇಲ್ಲದಂತೆ ಆಗಿದೆ. ಹೆಚ್ಚು ಮಳೆ ಇಲ್ಲದೆ ಜಡಿ ಮಳೆ ಇರುವ ಕಾರಣ ಕೆರೆ ಕುಂಟೆಗಳಿಗೆ ನೀರು ಬರುವಂತಹ ಮಳೆ ಆಗಿಲ್ಲದಿದ್ದರೂ ಭೂಮಿಯಲ್ಲಿ ತೇವಾಂಶ ನಿಲ್ಲುವಂತಾಗಿದೆ.
ಮಂಗಳವಾರ ಇಡೀ ದಿನ ಮೋಡ ಮುಚ್ಚಿದ ವಾತಾವರಣ ಕಂಡು ಬಂದಿತ್ತು. ನಿರಂತರವಾಗಿ ತುಂತುರು ಮಳೆ ಬೀಳುತ್ತಿತ್ತು. ಜಡಿ ಮಳೆಯಿಂದ ಮನೆಗಳಿಂದ ಹೊರ ಬರಲು ಸಾಧ್ಯವಾಗಿಲ್ಲ. ವ್ಯಾಪಾರ ವಹಿವಾಟು ಸ್ವಲ್ಪ ಮಟ್ಟಿಗೆ ಸ್ಥಗಿತಗೊಂಡAತೆ ಕಂಡುಬAದಿತ್ತು. ತಳ್ಳುವ ಗಾಡಿಗಳ ಮೇಲೆ ತರಕಾರ ಮಾರಾಟ ಮಾಡುವವರು ತುಂತುರು ಮಳೆ ಅಡ್ಡಿಯಾಗಿತ್ತು.
ಬೀದಿ ಬದಿ ವ್ಯಾಪಾರ ಮಾಡುತ್ತಿದ್ದವರಿಗೂ ಸಹ ಮಳೆ ಅಡ್ಡಿಯಾಗಿದ್ದು, ಜಡಿ ಮಳೆಯಿಂದಾಗಿ ವ್ಯಾಪಾರಸ್ಥರು ಅಂಗಡಿಗಳನ್ನು ಖಾಲಿ ಮಾಡಿದ್ದರು. ನಗರದಲ್ಲಿ ರಸ್ತೆಗಳಲ್ಲಿ ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.
ಗ್ರಾಮೀಣ ಭಾಗದಲ್ಲಿ ಜಾನುವಾರುಗಳಿಗೆ ಮೇವಿನ ಸಮಸ್ಯೆ :
ಕಳೆದ ೨ ದಿನಗಳಿಂದ ಜಿಲ್ಲೆಯಾದ್ಯಂತ ಜಡಿ ಮಳೆ ಸಮಸ್ಯೆಯಿಂದ ಜಾನುವಾರುಗಳಿಗೆ ಮೇವಿನ ಸಮಸ್ಯೆ ಉಂಟಾಗಿದೆ. ತರಕಾರಿಗಳನ್ನು ಕಿತ್ತು ಮಾರುಕಟ್ಟೆಗೆ ಸಾಗಿಸಲು ಮಳೆ ಅಡ್ಡಿಯಾಗಿದೆ. ರೇಷ್ಮೆ ಬೆಳೆಗಾರರಿಗೂ ಸಮಸ್ಯೆ ಉಂಟಾಗಿದೆ.