ಭ್ರಷ್ಟಾಚಾರ ನಿರ್ಮೂಲನೆ ಸಂಕಲ್ಪ

27HDK1
ಎಚ್.ಡಿ. ಕೋಟೆಯಲ್ಲಿ ಆಮ್ ಆದ್ಮಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ, ನಟ ಮುಖ್ಯಮಂತ್ರಿ ಚಂದ್ರು ಸಂವಾದ ನಡೆಸಿದರು. ಟೆನಿಸ್ ಕೃಷ್ಣ, ಗ್ರಾಮೀಣ ಮಹೇಶ್ ಇತರರು ಇದ್ದರು.
Published on

ಎಚ್.ಡಿ. ಕೋಟೆ: ದೇಶದಲ್ಲಿ ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಿಸಲು ಆಮ್ ಆದ್ಮಿ ಪಕ್ಷ ಸಂಕಲ್ಪ ಮಾಡಿದೆ ಎಂದು ಪ್ರಚಾರ ಸಮಿತಿ ಅಧ್ಯಕ್ಷ, ನಟ ಮುಖ್ಯಮಂತ್ರಿ ಚಂದ್ರು ತಿಳಿಸಿದರು.


ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷ, ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ ಪರ್ಯಾಯ ಶಕ್ತಿಯಾಗಿ ರೂಪುಗೊಂಡು ರಾಜ್ಯದಲ್ಲಿ ಅಧಿಕಾರ ಹಿಡಿಯಲಿದೆ ಎಂದರು.


ಅಣ್ಣಾ ಹಜಾರೆ ಹೋರಾಟದಿಂದ ಹುಟ್ಟಿದ ಆಮ್ ಆದ್ಮಿ ಪಕ್ಷ ಕೇವಲ 10 ವರ್ಷಗಳಲ್ಲಿ ಎರಡು ರಾಜ್ಯದಲ್ಲಿ ಅಧಿಕಾರ ಹಿಡಿದು ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದೆ ಎಂದರು.


ಪ್ರತಿಯೊಬ್ಬ ಭಾರತೀಯರಿಗೆ ಆರೋಗ್ಯ, ಶಿಕ್ಷಣ, ರಕ್ಷಣೆ ಸೇರಿದಂತೆ ಮೂಲಸೌಕರ್ಯ, ತೆರಿಗೆ ವಿನಾಯಿತಿ ನೀಡುವುದು ನಮ್ಮ ಪಕ್ಷದ ಉದ್ದೇಶ. ಪಂಜಾಬ್‌ನಲ್ಲಿ ಬಿಜೆಪಿಯನ್ನು ಧೂಳಿಪಟ ಮಾಡಿ 67 ಸ್ಥಾನ ಪಡೆದು ಪ್ರಣಾಳಿಕೆಯಲ್ಲಿ ಹೇಳಿದಂತೆ ನಡೆದುಕೊಂಡಿದ್ದೇವೆ ಎಂದರು.


ಪರಸ್ಪರ ಟೀಕೆಗಳನ್ನು ಬಿಟ್ಟು ಪಕ್ಷದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆಗೆ ಹೋಗಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ತಿಳಿಸಿದರು.
ಚಲನಚಿತ್ರ ನಟ ಟೆನಿಸ್ ಕೃಷ್ಣ, ಪಕ್ಷದ ವಲಯ ಸಂಯೋಜಕ ದರ್ಶನ್, ಮುಖಂಡರಾದ ಅಬ್ದುಲ್ ರಜಾಕ್, ರಂಗಯ್ಯ, ಮಹೇಶ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net