ಭೂಮಿಯನ್ನು ರಾಸಾಯನಿಕ ಮುಕ್ತ ಮಾಡಿ

40
Published on

ಭೂಮಿಯನ್ನು ರಾಸಾಯನಿಕ ಮುಕ್ತ ಮಾಡಿ, ನೆಸರ್ಗಿಕ ಕೃಷಿ ಅನುಸರಿಸಿ ಎಂದು ನಂಜನಗೂಡು ತಾ. ಹೊಸಕೋಟೆ ಪ್ರಗತಿಪರ ರೆತ ಸಿದ್ದಪ್ಪ ಕರೆ ನೀಡಿದರು.

ನಾಗನಹಳ್ಳಿಯ ಸಾವಯವ ಕೃಷಿ ಸಂಶೋಧನಾ ಕೇಂದ್ರದ ವಿಸ್ತರಣಾ ಶಿಕ್ಷಣ ಘಟಕವು ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ರೈತ ದಿನವನ್ನು ಉದ್ಘಾಟಿಸಿ ಮಾತನಾಡಿದರು. ಇದರಿಂದ ಭೂಮಿ ಹಾಳಾಗುವುದು ತಪ್ಪುವುದಲ್ಲದೇ ಮನುಷ್ಯರ ಆರೋಗ್ಯವೂ ಕೂಡ ಉತ್ತಮವಾಗಿರುತ್ತದೆ ಎಂದರು.

ಮಳೆ ನೀರನ್ನು ಜಮೀನಿನಲ್ಲಿಯೇ ಹಿಂಗಿಸಬೇಕು. ತ್ಯಾಜ್ಯವನ್ನು ಅಲ್ಲಿಯೇ ಕೊಳೆಸಬೇಕು ಎಂದು ಅವರು ಸಲಹೆ ನೀಡಿದರು.

ಬನ್ನೂರಿನ ಪ್ರಗತಿಪರ ರೈತ ಮಹಿಳೆ ಚೆತ್ರಾ ಹಾಗೂ ಅವರ ಪತಿ ಮೋಹನಕುಮಾರ್ ಮಾತನಾಡಿ, ಅಣಬೆ ಬೇಸಾಯದಿಂದ ಆಗುವ ಆರ್ಥಿಕ ಲಾಭವನ್ನು ವಿವರಿಸಿದರು. ಅಣಬೆ ಮಾರಾಟಕ್ಕೆ ನಾವೇ ಮಾರುಕಟ್ಟೆಯನ್ನು ಸೃಷ್ಟಿಸಿಕೊಳ್ಳಬೇಕು ಎಂದರು.

ಬಸ್ತಿಮಾದನಹಳ್ಳಿಯ ಯುವ ರೈತ ಅಖಿಲ್ ಮಾತನಾಡಿ, ರೈತರು ಸಾವಯವ ಕೃಷಿ ಮಾಡಬೇಕು. ಈ ಕೇಂದ್ರದಲ್ಲಿ ನೀಡುವ ತರಬೇತಿಯ ಲಾಭ ಪಡೆದುಕೊಳ್ಳಬೇಕು. ಮನಸ್ಸೊಂದಿದ್ದರೆ ಏನು ಬೇಕಾದರೂ ಸಾಧಿಸಬಹುದು. ಏಕಬೆಳೆ ಪದ್ಧತಿ ಬದಲು ಬಹುಬೆಳೆ ಪದ್ಧತಿ ಅನುಸರಿಸಬೇಕು ಎಂದರು.

ಕೊಡಸೀಗೆಯ ರೈತರಾದ ಚೇತನಾ ಹಾಗೂ ಅವರ ಪತಿ ಮಹೇಶ್ ಗೌಡ ಮಾತನಾಡಿ, ವ್ಯವಸಾಯಲ್ಲಿ ಯಾವ ರೀತಿ ಲಾಭ ಗಳಿಸಬಹುದು ಎಂದು ವಿವರಿಸಿದರು.

ತಳೂರಿನ ಮಹದೇವಮ್ಮ ಅವರು ರೇಷ್ಮೆ ಬೆಳೆಯಿಂದ ಬರುತ್ತಿರುವ ಲಾಭ, ಸುಗ್ಗನಹಳ್ಳಿಯ ಪ್ರತಾಪ್ ಅವರು, ಗುಲಾಬಿ ಹಾಗೂ ರೇಷ್ಮೆಯಿಂದ ಬರುತ್ತಿರುವ ಆದಾಯದ ಬಗ್ಗೆ ವಿವರಿಸಿದರು.

ಕೋರಮಂಡಲ್ ಇಂಟರ್ ನ್ಯಾಷನಲ್ ಲಿ. ಬೇಸಾಯಶಾಸ್ತ್ರಜ್ಞ ಎ.ಆರ್. ರವಿಕಿರಣ್ ಮಾತನಾಡಿ, ಇಡೀ ಮಾನವಕುಲ ರೆತರ ಮೇಲೆಯೇ ನಿಂತಿದೆ. ಹೀಗಾಗಿ ಕೃಷಿ ಸ್ನಾತಕೋತ್ತರ ಪದವಿ ಓದಿದ್ದ ನಾನು ಎಚ್‌ಡಿಎಫ್‌ಸಿ ಬ್ಯಾಂಕಿನ ಪ್ರತಿಷ್ಠಿತ ಉದ್ಯೋಗ ತ್ಯಜಿಸಿ, ರೈತರಿಗೆ ಜಾಗೃತಿ ಮೂಡಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದೇನೆ ಎಂದರು.

ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಬೇಕು. ಮಣ್ಣಿನ ಆರೋಗ್ಯ ಕಾಪಾಡಬೇಕು. ನೀರಿನ ಸಂರಕ್ಷಣೆ ಮಾಡಬೇಕು. ವಿಜ್ಞಾನಿಗಳು ಶಿಫಾರಸ್ ಮಾಡಿದ ಪ್ರಮಾಣದಲ್ಲಿ ಪೋಷಕಾಂಶವುಳ್ಳ ಸಾವಯವ ಗೊಬ್ಬರ ಬಳಸಬೇಕು. ಕೋರಮಂಡಲ್ ಕಂಪನಿ ಕೂಡ ಈ ರೀತಿಯ ಹಲವಾರು ಉತ್ಪನ್ನಗಳನ್ನು ತಯಾರಿಸುತ್ತಿದೆ ಎಂದರು.

ಇಸ್ರೇಲ್ ಕೆಮಿಕಲ್ಸ್ ಲಿ ಪ್ರಾದೇಶಿಕ ಬೇಸಾಯತಜ್ಞ ಡಾ.ಎಸ್.ಆರ್. ರಾಜೇಶ್ ಮಾತನಾಡಿ, ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚುವರಿ ಇಳುವರಿ ಬರುವಂತೆ ಕೃಷಿ ಮಾಡಬೇಕು. ಇಸ್ರೇಲ್ ತಂತ್ರಜ್ಞಾನ ಇದಕ್ಕೆಲ್ಲಾ ಪರಿಹಾರ ಒದಗಿಸಬಲ್ಲದು ಎಂದರು.

ನಾಗನಹಳ್ಳಿ ಸಾವಯವ ಸಂಶೋಧನಾ ಕೇಂದ್ರದ ತಾಂತ್ರಿಕ ಅಧಿಕಾರಿ ಡಾ.ಜಿ.ವಿ. ಸುಮಂತ್ ಕುಮಾರ್, ಹವಾಮಾನ ವರದಿಯ ಪ್ರಾಮುಖ್ಯತೆಯನ್ನು ರೆತರಿಗೆ ತಿಳಿಸಿಕೊಟ್ಟರು.

ಇದೇ ವೇಳೆ ಕೆ.ಆರ್. ನಗರ ತಾ. ಸುಗ್ಗನಹಳ್ಳಿಯ ಎಸ್.ಪಿ. ಪ್ರತಾಪ್, ಬಸವರಾಜ ಪುರದ ಸಂದೀಪ್ ರಾಜು, ಅರಸನಕೊಪ್ಪಲಿನ ಎಸ್. ಸಿಂಧು, ಮೈಸೂರು ತಾ. ತಳೂರಿನ ಮಹದೇವಮ್ಮ, ನುಗ್ಗೆಹಳ್ಳಿಯ ಎಸ್.ರವಿಚಂದ್ರ, ಯಾಚೇಗೌಡನ ಹಳ್ಳಿಯ ಎಚ್.ಎಸ್.ಅಂಬಿಕಾ, ತಿ. ನರಸೀಪುರ ತಾ. ಎಡದೊರೆಯ ಜಿ.ಆರ್. ರಾಚಯ್ಯ, ರಂಗಸಮುದ್ರದ ವೀಣಾ, ನಂಜನಗೂಡು ತಾ. ಕಾಳಿಹುಂಡಿಯ ಎಸ್. ಕೆಂಪಣ್ಣ, ಬ್ಯಾಳ್ಯಾರಿನ ಧನಲಕ್ಷ್ಮಿ, ಹುಣಸೂರು ತಾ. ಬಸ್ತಿ ಮಾದನಹಳ್ಳಿಯ ಅಖಿಲ್, ಕುಡಿನೀರು ಮುದ್ದನಹಳ್ಳಿಯ ಶಾಂಭವಿ, ಪಿರಿಯಾಪಟ್ಟಣ ತಾ. ತಾತನಹಳ್ಳಿಯ ಟಿ.ಎನ್. ದಿನೇಶ್, ಕೀರನಲ್ಲಿಯ ಎಚ್.ಡಿ. ಸಹನಾ, ಎಚ್.ಡಿ. ಕೋಟೆ ತಾಲೂಕಿನ ಚಾಮಹಳ್ಳಿಯ ಎಸ್. ಚೇತನಕುಮಾರ್, ಕೊಡಸೀಗೆಯ ಕೆ.ಎನ್. ಚೇತನಾ ಅವರನ್ನು ಸನ್ಮಾನಿಸಲಾಯಿತು.

ಕೃಷಿ ತಂತ್ರಜ್ಞರ ಸಂಸ್ತೆಯ ಕಾರ್ಯದರ್ಶಿ ರವೀಂದ್ರ ಕಟ್ಟಿ, ಸಾವಯವ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ.ಸಿ. ರಾಮಚಂದ್ರ, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಇದ್ದರು.

ಚಿತ್ರ ಸಂಖ್ಯೆ...40

*ನಾಗನಹಳ್ಳಿ ಸಾವಯವ ಕೃಷಿ ಸಂಶೋಧನಾ ಕೇಂದ್ರದಲ್ಲಿ ಸೋಮವಾರ ಆಯೋಜಿಸಿದ್ದ ರಾಷ್ಟ್ರೀಯ ರೈತ ದಿನ ಕಾರ್ಯಕ್ರಮದಲ್ಲಿ ಸಾಧಕ ರೈತರನ್ನು ಸನ್ಮಾನಿಸಲಾಯಿತು. ಡಾ.ಸಿ.ರಾಮಚಂದ್ರು, ಅಂಶಿ ಪ್ರಸನ್ನಕುಮಾರ್, ರವೀಂದ್ರ ಕಟ್ಟಿ, ಸಿದ್ದಪ್ಪ, ಚೆತ್ರಾ, ಎ.ಆರ್. ರವಿ ಕಿರಣ್, ಡಾ.ಎಸ್.ಆರ್.ರಾಜೇಶ್, ಡಾ.ಆರ್.ಎಲ್.ಪುಷ್ಪಾ, ಡಾ.ಜಿ.ವಿ. ಸುಮಂತ್ ಕುಮಾರ್, ಪಾಷ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net