ಭೂಮಿ ಯೋಜನೆಯಲ್ಲಿ ಹುಬ್ಬಳ್ಳಿ ಶಹರ ತಾಲೂಕು ರಾಜ್ಯಕ್ಕೆ ಪ್ರಥಮ

h16-shashidar madyal
Published on

ಹುಬ್ಬಳ್ಳಿ: ಭೂಮಿ ಯೋಜನೆಯಡಿ ಜೂನ್-2022 ಮಾಹೆಯಲ್ಲಿ ಸಾರ್ವಜನಿಕರಿಂದ ಸ್ವೀಕರಿಸಿರುವ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ಶೀಘ್ರ ವಿಲೇವಾರಿ ಮಾಡಿದ ಹಿನ್ನೆಲೆಯಲ್ಲಿ ಶಹರ ತಹಸೀಲ್ದಾರ್ ಶಶಿಧರ ಮಾಡ್ಯಾಳ ಅವರಿಗೆ ಭೂಮಾಪನ ಇಲಾಖೆ ಆಯುಕ್ತ ಹಾಗೂ ಭೂಮಿ ಯೋಜನೆ ನಿರ್ದೇಶಕ ಮುನೀಶ ಮೌದ್ಗಿಲ್ ಶ್ಲಾಘಿಸಿ ಪತ್ರ ಬರೆದಿದ್ದಾರೆ.

5.66 ಸಿಗ್ಮಾ ಮೌಲ್ಯ ಹಾಗೂ 4,783 ವಿಲೇವಾರಿ ಸೂಚ್ಯಾಂಕ (ಡಿಸ್ಪೋಸಲ್ ಇಂಡೆಕ್ಸ್) ಪಡೆದಿರುವ ಹುಬ್ಬಳ್ಳಿ ಶಹರ ತಾಲೂಕು, ರಾಜ್ಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ್ದು, ಪ್ರಥಮ ಸ್ಥಾನದಲ್ಲಿದೆ. ಕಚೇರಿಯ ಅಧಿಕಾರಿ, ಸಿಬ್ಬಂದಿ ಸಹಕಾರ, ಕಾರ್ಯತತ್ಪರತೆ ಕಾರಣವಾಗಿರುತ್ತದೆ . ಭೂಮಿ ಉಸ್ತುವಾರಿ ಕೋಶದ ಪರವಾಗಿ ತಂಡಕ್ಕೆ ಅಭಿನಂದಿಸುತ್ತೇನೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯ ಸಹಕಾರ ಹಾಗೂ ಕಾರ್ಯಕ್ಷಮತೆಯನ್ನು ತಮ್ಮಿಂದ ನಿರೀಕ್ಷಿಸುತ್ತೇನೆ ಎಂದು ಅವರು ಪತ್ರದಲ್ಲಿ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net