

ಬಾಳೆಹೊನ್ನೂರು: ಹೋಬಳಿಯ ಭೀಮ್ ಆರ್ಮಿ ಘಟಕದ ನೂತನ ಅಧ್ಯಕ್ಷರಾಗಿ ಉಮೇಶ್ ಎನ್. ಪೇಟೆಕೆರೆ, ಮಹಿಳಾ ಘಟಕದ ಅಧ್ಯಕ್ಷೆಯಾಗಿ ಪವಿತ್ರಾ ಪೇಟೆಕೆರೆ ಆಯ್ಕೆಯಾಗಿದ್ದಾರೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸೋಮವಾರ ಶೃಂಗೇರಿ ಕ್ಷೇತ್ರ ಭೀಮ್ ಆರ್ಮಿ ಅಧ್ಯಕ್ಷ ಅಣ್ಣು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹೋಬಳಿ ಘಟಕಕ್ಕೆ ಅಮ್ಜದ್ ಪಾಷಾ (ಉಪಾಧ್ಯಕ್ಷ), ದಿವ್ಯಾ (ಗ್ರಾಮ ಸಮಿತಿ ಅಧ್ಯಕ್ಷೆ) ಆಯ್ಕೆಯಾದರು. ಸಭೆಯಲ್ಲಿ ಎನ್.ಆರ್.ಪುರ ತಾಲೂಕು ಘಟಕದ ಅಧ್ಯಕ್ಷ ನಾಗರಾಜ್, ಕೊಪ್ಪ ತಾಲೂಕು ಅಧ್ಯಕ್ಷ ಸುಧಾಕರ, ಹೋಬಳಿ ಪ್ರಚಾರ ಸಮಿತಿ ಅಧ್ಯಕ್ಷ ಹರೀಶ್ ಮಹಲ್ಗೋಡು, ಸಂಘಟನಾ ಕಾರ್ಯದರ್ಶಿ ಕೃಷ್ಣ, ತಾಲೂಕು ಖಜಾಂಚಿ ಜಗದೀಶ್, ಸುರೇಶ್ ಹುಯಿಗೆರೆ, ಮಧುರಾ, ಶಂಕರ, ಪ್ರವೀಣ, ವಿ.ಅಂಬುಜಾ ಇತರರಿದ್ದರು.