

ಕುಶಾಲನಗರ : ಗ್ರಾಮೀಣ ಪ್ರದೇಶದ ಜನರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಬದ್ಧವಾಗಿದ್ದು, ವಿವಿಧ ಯೋಜನೆಗಳನ್ನು
ಜನರು ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಕೂಡಿಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಕೆ.ಟಿ. ಗಿರೀಶ್ ಕುಮಾರ್
ಹೇಳಿದರು. ಸಮೀಪದ ಕೂಡಿಗೆ ಗ್ರಾಮದಲ್ಲಿ ಭಾರತ್ ಒನ್ ಜನಸಂಪರ್ಕ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಭಾರತ್ ಒನ್ ಜನ ಸಂಪರ್ಕ ಕೇಂದ್ರದ ಮೂಲಕ ಕೇಂದ್ರದ ಸರ್ಕಾರದ ವಿವಿಧ ಸೇವಾ ಯೋಜನೆ, ಸೌಲಭ್ಯಗಳ ಮಾಹಿತಿಗಳು, ಸವಲತ್ತುಗಳನ್ನು ಪಡೆಯಲು ವಿವರಗಳು ಒಂದೇ ಸೂರಿನ ಅಡಿ ಹಳ್ಳಿಗಾಡಿನ ಜನರಿಗೆ ದೊರಕಲಿದೆ. ಈ ನಿಟ್ಟಿನಲ್ಲಿ ಕೇಂದ್ರದ ಪ್ರಯೋಜನವನ್ನು ಗ್ರಾಮಸ್ಥರು ಪಡೆದುಕೊಳ್ಳಬೇಕೆಂದು ಅವರು ಹೇಳಿದರು. ಭಾರತ್ ಒನ್ ಜನಸಂಪರ್ಕ ಕೇಂದ್ರದ ಅಧಿಕಾರಿ ಎನ್. ಯು. ದೇವದತ್ತ, ಎಚ್.ಎಸ್. ದೇವರಾಜ್, ಎಚ್.ಎಚ್. ಶೋಭಾ ಮತ್ತಿತರರು ಇದ್ದರು.