ಭಾರತೀಯರಲ್ಲಿ ಅಭಿಮಾನ ಹೆಚ್ಚಿಸಿದ ಚಂದ್ರಯಾನ

24HDK01 (1)
ಎಚ್.ಡಿ.ಕೋಟೆ ಪಟ್ಟಣದ ಬಾಪೂಜಿ ವೃತ್ತದಲ್ಲಿ ವಿವಿಧ ಸಂಘಟನೆ ವತಿಯಿಂದ ಸಂಭ್ರಮಾಚರಣೆ ನಡೆಯಿತು.
Published on

ಎಚ್.ಡಿ.ಕೋಟೆ: ಯಶಸ್ವಿ ಚಂದ್ರಯಾನ ಭಾರತೀಯರಲ್ಲಿ ಅಭಿಮಾನವನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಕನ್ನಡ ಪ್ರಮೋದ್ ತಿಳಿಸಿದರು.

ಚಂದ್ರಯಾನ ಯಶಸ್ವಿಯಾದ ಹಿನ್ನೆಲೆಯಲ್ಲಿ ಪಟ್ಟಣದ ಬಾಪೂಜಿ ವೃತ್ತದಲ್ಲಿ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ ಗುರುವಾರ ಸಾರ್ವಜನಿಕರಿಗೆ ಸಿಹಿ ಹಂಚಿ ಮಾತನಾಡಿದರು.

ಇಸ್ರೋ ವಿಜ್ಞಾನಿಗಳ ಸಾಧನೆ ಮುಚ್ಚುವಂತದ್ದು. ದೇಶದ ಹಿರಿಯ ವಿಜ್ಞಾನಿಗಳಾದ ವಿಕ್ರಂ ಸರಭಾಯ್, ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಸೇರಿದಂತೆ ಮೊದಲಾದವರು ಕಂಡ ಬಾಹ್ಯಾಕಾಶದ ಕನಸುನ್ನು ವಿಜ್ಞಾನಿಗಳು ನನಸು ಮಾಡಿರುವುದು ಭಾರತೀಯರಲ್ಲಿ ಸಂತೋಷ ವನ್ನುಂಟು ಮಾಡಿದೆ ಎಂದರು.

ಈ ಅಮೂಲ್ಯವಾದ ಕ್ಷಣವನ್ನು ದೇಶದ ಜನರು ಸಂಭ್ರಮಿಸಿದರೆ, ಇಡೀ ಜಗತ್ತು ಭಾರತದ ಕಡೆ ನೋಡುವಂತೆ ವಿಜ್ಞಾನಿಗಳು ಮಾಡಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಲಾಯಿತು. ವರ್ತಕರ ಸಂಘದ ಅಧ್ಯಕ್ಷ ವಿನಯ್ ಭಜರಂಗಿ, ಕಾರ್ಯದರ್ಶಿ ಸ್ವಾಮಿ, ಪುರಸಭಾ ಸದಸ್ಯ ಮಿಲ್ ನಾಗರಾಜು, ಜೆ.ಪಿ ಶಿವರಾಜಪ್ಪ, ಜಯಂತ್, ಎಚ್.ಕೆ ಪ್ರಕಾಶ್, ನಂದೀಶ್, ಡೈರಿ ಶ್ರೀಕಾಂತ್, ಕಸ್ತೂರಿ ಮಹೇಶ್, ಜಿ.ರವಿ, ಯಶವಂತ್, ರಾಜು, ಪ್ರಭು, ರತನ್, ನಾರಾಯಣ್ ಲಾಲ್ ಸೇರಿದಂತೆ ಕಾಲೇಜು ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net