

ಭಾರತದ ಸರ್ಕಾರದ ಪ್ರಧಾನಮಂತ್ರಿ ಆವಾಸ್ (ನಗರ) 2.0 ಯೋಜನೆಯನ್ನು ಸರ್ವರಿಗೂ ಸೂರು ಒದಗಿಸಲು 01.09.2024 ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗಿದ್ದು, ಪ್ರಧಾನಮಂತ್ರಿ ಆವಾಸ್ ನಗರ ಯೋಜನೆಯಡಿ ಬೇಡಿಕೆ ಸಮೀಕ್ಷೆಯ ಇವರಗಳನ್ನು ನಮೂದಿಸಲು ಕೇಂದ್ರ ಸರ್ಕಾರವು Unified Web Portel ಆನ್‌ಲೈನ್ ವ್ಯವಸ್ಥೆಯನ್ನು ಮಾಡಿದ್ದು, ಸ್ವತಃ ಫಲಾನುಭವಿಗಳು ಕೂಡ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಫಲನುಭವಿಗಳು URL:https://pmay-urban.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೂಟಗಳ್ಳಿ ನಗರಸಭೆ ವ್ಯಾಪ್ತಿಯಲ್ಲಿರುವ ಅರ್ಹ ವಸತಿ ರಹಿತ/ನಿವೇಶನ ರಹಿತ ಫಲಾನುಭವಿಗಳು ಪ್ರಧಾನಮಂತ್ರಿ ಆವಾಸ್(ನಗರ)2.0 ಯೋಜನೆಯಡಿ ರೂ. 1.50 ಲಕ್ಷ ಸಹಾಯ ಧನವನ್ನು ಪಡೆದು ವಸತಿ ಸೌಕರ್ಯ ಪಡೆಯಲು ಜುಲೈ 15 ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಅರ್ಜಿದಾರರು ಆಧಾರ್ ಕಾರ್ಡ್, ವಸತಿ ರಹಿತರಾಗಿದಲ್ಲಿ ನಿವೇಶನಕ್ಕೆ ಸಂಬAಧಿಸಿದ ದಾಖಲೆಗಳು, ಸಕ್ಷಮ ಪ್ರಾಧಿಕಾರದಿಂದ ಪಡೆದಿರುವ ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಪಡಿತರ ಚೀಟಿ, ಚುನಾವಣಾ ಗುರುತಿನ ಚೀಟಿ, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ವಿವರ, ನಿಗದಿತ ನಮೂನೆ (Annexure-2A/2B/2C) ಯಲ್ಲಿ “Self Undertaking” ಸಲ್ಲಿಸುವುದು, ಮೊಬೈಲ್ ಸಂಖ್ಯೆ, ಕಟ್ಟಡ ಪರವಾನಗಿ, ಪ್ಯಾನ್ ಕಾರ್ಡ್ ದಾಖಲೆಗಳನ್ನು ಹೊಂದಿರಬೇಕು.
ಹೆಚ್ಚಿನ ಮಾಹಿತಿಗಾಗಿ ಹೂಟಗಳ್ಳಿ ನಗರಸಭಾ ಕಾರ್ಯಾಲಯದ ಕಚೇರಿಯ ದೂ.ಸಂ: 0821-2001737 ನ್ನು ಸಂಪರ್ಕಿಸಬಹುದು ಎಂದು ಹೂಟಗಳ್ಳಿ ನಗರಸಭೆಯ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.