ಭಾಗವತಿ ಕಬ್ಬಿನ ಗದ್ದೆಗೆ ಓಡಿ ಬಂದ ಕಾಡಾನೆ

26-hly-kadane
Published on

ಹಳಿಯಾಳ: ತಾಲೂಕಿನ ಭಾಗವತಿ ಗ್ರಾಮದ ಕಬ್ಬಿನ ಗದ್ದೆಯೊಂದರಲ್ಲಿ ಬುಧವಾರ ಬೆಳ್ಳಂಬೆಳಿಗ್ಗೆ ಕಾಡಾನೆಯೊಂದು ಕಾಣಿಸಿದ್ದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಹಳಿಯಾಳ-ಯಲ್ಲಾಪುರ ರಾಜ್ಯ ಹೆದ್ದಾರಿಯ ಗಡಿ ಗ್ರಾಮ ಭಾಗವತಿ ಗ್ರಾಮವು ಅರಣ್ಯಕ್ಕೆ ತಾಗಿಕೊಂಡಿದೆ. ಬುಧವಾರ ಬೆಳಗ್ಗೆ ಕಾಡಾನೆಯೊಂದು ಗ್ರಾಮದೊಳಗೆ ದಾಂಗುಡಿ ಇಡಲು ಪ್ರಯತ್ನಿಸುತ್ತಿರುವುದನ್ನು ಕಂಡ ಗ್ರಾಮದ ಯುವಕರು ತಕ್ಷಣ ಎಲ್ಲರಿಗೂ ಮಾಹಿತಿ ನೀಡಿದ್ದಾರೆ. ಆನೆಯು ಕಬ್ಬಿನ ಗದ್ದೆಯಿಂದ ಗ್ರಾಮದೊಳಗೆ ಬರದಂತೆ ತಡೆದಿದ್ದಾರೆ. ಬಳಿಕ ಗ್ರಾಮಸ್ಥರು ಕೆಲ ಹೊತ್ತು ಪಟಾಕಿ ಸಿಡಿಸಿ, ಗದ್ದಲ ಮಾಡಿ ಆನೆಯನ್ನು ಬೆದರಿಸಿ ಪಕ್ಕದ ಕಾಡಿಗೆ ಅಟ್ಟುವಲ್ಲಿ ಸಫಲರಾದರು. ಬಳಿಕ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಆನೆ ಓಡಾಡಿದ ಕಬ್ಬಿನ ಗದ್ದೆಯಲ್ಲಿ ಅಲ್ಪ ಪ್ರಮಾಣದಲ್ಲಿ ಫಸಲು ಹಾನಿಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net