ಭವನಗಳು ಸಂಘಟಿತ ಕಾರ್ಯಗಳಿಗೆ ಬಳಕೆಯಾಗಲಿ

HUN-DEC-3-1(AMBEDKER BHAVANA INAGURATION)
Published on

ಹುಣಸೂರು: ಸಮುದಾಯ ಭವನಗಳು ಗ್ರಾಮದ ಸಂಘಟಿತ ಕಾರ್ಯಗಳಿಗೆ ಬಳಕೆಯಾಗಬೇಕೇ ಹೊರತು ಪಾಳು ಬಂಗಲೆಗಳಾಗಬಾರದು ಶಾಸಕ ಎಚ್.ಪಿ. ಮಂಜುನಾಥ್ ಅಭಿಪ್ರಾಯಪಟ್ಟರು.


ತಾಲೂಕಿನ ಬಿಳಿಕೆರೆ ಹೋಬಳಿ ದಲ್ಲಾಳು ಗ್ರಾಮದಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ 12 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣಗೊಂಡ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.


ಸಮುದಾಯ ಭವನಗಳು ಆಯಾ ಗ್ರಾಮದ ಸಾಮರಸ್ಯದ ಕೊಂಡಿಗಳಾಗಬೇಕಿದೆ. ಸಾಮಾಜಿಕ ಕಳಕಳಿಯನ್ನು ಹೊಂದಿದ ಕಾರ್ಯಕ್ರಮಗಳನ್ನು ಸಮುದಾಯ ಭವನದಲ್ಲಿ ಆಯೋಜಿಸುವುದು ಅಗತ್ಯ. ಸ್ತ್ರೀಶಕ್ತಿ ಮಹಿಳಾ ಸಂಘಗಳ ಕಾರ್ಯಚಟು ವಟಿಕೆಗಳ ಆಯೋಜನೆಗೂ ಅವಕಾಶ ಸಿಗಲಿ. ಸಮುದಾಯ ಭವನಗಳನ್ನು ಪಾಳು ಬಂಗಲೆ ಯಾಗಲು ಬಿಡಬೇಡಿ. ವಿಶ್ವಮಾನ್ಯ ಅಂಬೇಡ್ಕರ್ ಅವರ ಹೆಸರಿನಲ್ಲಿ ಭವನಗಳು ಸ್ಥಾಪನೆಯಾಗು ತ್ತಿದ್ದು, ದಲಿತ ಸಮುದಾಯ ಶಿಕ್ಷಣದತ್ತ ಹೆಚ್ಚಿನ ಆದ್ಯತೆ ನೀಡಬೇಕು. ಭವನದಲ್ಲಿ ಗ್ರಂಥಾಲಯ ಸ್ಥಾಪಿಸಿದಲ್ಲಿ ಅವಶ್ಯವಿರುವ ದಿನಪತ್ರಿಕೆಗಳನ್ನು ನನ್ನ ವೈಯಕ್ತಿಕ ವೆಚ್ಚದಿಂದ ಪೂರೈಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಚಿಕ್ಕಬೀಚನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಮತಾ ಭಾಸ್ಕರ್, ಉಪಾಧ್ಯಕ್ಷೆ ದೀಪು ಗೋವಿಂದೇಗೌಡ, ಬಿಳಿಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೇವರಾಜ್, ಮುಂಖಡರಾದ ಹಂದನಹಳ್ಳಿ ಸೋಮಶೇಖರ್, ಗಾಗೇನಹಳ್ಳಿ ಕುಮಾರ್, ಬಿಳಿಕೆರೆ ಬಾಬು, ನಾಗರಾಜಯ್ಯ, ಬೆಟ್ಟಯ್ಯ, ಸಣ್ಣಸ್ವಾಮಿ, ಚಲುವರಾಜ್, ಕಣ್ಣಪ್ಪ, ಸಿದ್ದೇಗೌಡ, ನಟರಾಜ್, ನಾಗೇಶ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್‌ಕುಮಾರ್, ಪಿಡಿಒ ಛಾಯಾದೇವಿ, ಲ್ಯಾಂಡ್ ಆರ್ಮಿ ವಿಭಾಗದ ಅಧಿಕಾರಿ ವಿಜಯ್ ಹಾಗೂ ಗ್ರಾಮಸ್ಥರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net