ಭರಮಸಾಗರದಲ್ಲಿ ಸ್ವಾಮಿಗಳ ಆರಾಧನೆ

brm aradhane 01 A
Published on

ಭರಮಸಾಗರ: ಶ್ರೀ ರಾಘವೇಂದ್ರ ಸ್ವಾಮಿಗಳ ಮಧ್ಯಾರಾಧನೆ ಪ್ರಯುಕ್ತ ಇಲ್ಲಿನ ದೊಡ್ಡಪೇಟೆ ಶ್ರೀ ರಾಘವೇಂದ್ರ ಕೃಪಾಶ್ರಮದಲ್ಲಿ ಶುಕ್ರವಾರ ವಿಶೇಷ ಪೂಜೆಗಳು ವೈಭವದಿಂದ ನಡೆದವು.
ಬೆಳಗ್ಗೆ ಕಾಕಡಾರತಿ, ಸುಪ್ರಭಾತ ಸೇವೆ, ಫಲಪಂಚಾಮೃತ ಅಭಿಷೇಕ, ನೂತನ ವಸ್ತ್ರಧಾರಣೆ, ಅಲಂಕಾರ, ಬಿಕ್ಷಾ, ತೀರ್ಥ ಪ್ರಸಾದ ವಿನಿಯೋಗ ನಡೆಯಿತು.
ನಂತರ ಭಜನೆ ಕಾರ್ಯಕ್ರಮ ನಡೆಯಿತು. ಶುಕ್ರವಾರ ಉತ್ತರ ಆರಾಧನೆ ಪ್ರಯುಕ್ತ ಸುಮಂಗಲಿ ಪೂಜೆ, ಸತ್ಯನಾರಾಯಣ ಪೂಜೆ ಇತರ ಧಾರ್ಮಿಕ ಕರ್ಯಕ್ರಮಗಳೊಂದಿಗೆ ಮೂರು ದಿನಗಳ ಆರಾಧನಾ ಮಹೋತ್ಸವ ಸಂಪನ್ನಗೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net