ಭದ್ರೆಗೆ ಜಾಕ್‌ವೆಲ್ ಹಾಕಿದ ಜಲಜೀವನ್ ಮಿಷನ್

27 TKE STORY 1
ಲಕ್ಕವಳ್ಳಿ ಸಮೀಪದ ಭದ್ರಾ ಜಲಾಶಯ.
Published on

ತರೀಕೆರೆ: ಮನೆ ಮನೆಗೆ ಶುದ್ಧ ಕುಡಿಯುವ ನೀರು ಪೂರೈಸುವ ಸಲುವಾಗಿ ಅನುಷ್ಠಾನಗೊಳಿಸಿರುವ ಜಲಜೀವನ್ ಮಿಷನ್ ಯೋಜನೆಯಿಂದ ಮಧ್ಯ ಕರ್ನಾಟಕ ಭಾಗದ ಜೀವನಾಡಿ ಭದ್ರೆಗೆ ಕಂಟಕ ಎದುರಾಗಿದೆ. ಅದರಲ್ಲೂ ಬಲದಂಡೆ ನಾಲೆ ಸೀಳಿ ಪೈಪ್‌ಲೈನ್ ಮೂಲಕ ನೀರೆತ್ತಿಕೊಳ್ಳುವ ಅವೈಜ್ಞಾನಿಕ ಕಾಮಗಾರಿಯಿಂದ ಅಚ್ಚುಕಟ್ಟು ಪ್ರದೇಶದ ಅಸಂಖ್ಯಾತ ಅನ್ನದಾತರು ಆತಂಕ ಪಡುವಂತಾಗಿದೆ.

2,187 ಕೋಟಿ ರೂ. ವೆಚ್ಚದಲ್ಲಿ ಹೊಸದುರ್ಗ, ಕಡೂರು, ಹೊಸದುರ್ಗ, ತರೀಕೆರೆ ಮತ್ತು ಚಿಕ್ಕಮಗಳೂರು ತಾಲೂಕಿನ ಬರೋಬ್ಬರಿ 1,126 ಜನವಸತಿ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶಕ್ಕೆ ಕೈಗೆತ್ತಿಕೊಂಡಿರುವ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ರೈತರಲ್ಲಿ ತಲ್ಲಣ ಸೃಷ್ಟಿಸಿದೆ.

ಭಾರಿ ವಿರೋಧದ ನಡುವೆಯೂ ಬಲದಂಡೆ ನಾಲೆ ಸೀಳಿ ದಿನವೊಂದಕ್ಕೆ ನೂರಾರು ಕ್ಯೂಸೆಕ್ ನೀರು ಬಳಸಿಕೊಳ್ಳುವ ಯೋಜನೆ ಕಾರ್ಯಗತವಾದರೆ ತರೀಕೆರೆ ತಾಲೂಕಿನ ಲಕ್ಕವಳ್ಳಿ, ಕೆಂಚಿಕೊಪ್ಪ, ಹಲಸೂರು, ರಂಗೇನಹಳ್ಳಿ, ಬಾವಿಕೆರೆ ಗ್ರಾಮಗಳು, ಭದ್ರಾವತಿ, ಚನ್ನಗಿರಿ, ದಾವಣಗೆರೆ ಇತರ ಕಡೆಯ ಲಕ್ಷಾಂತರ ಹೆಕ್ಟೇರ್ ಭೂ ಪ್ರದೇಶ ನೀರಿಲ್ಲದೆ ಬತ್ತಿ ಬರಡಾಗಲಿದೆ. ಭದ್ರಾ ಅಚ್ಚುಕಟ್ಟಿನ ಕೊನೇ ಭಾಗದ ರೈತರಂತೂ ಕೃಷಿ ಚಟುವಟಿಕೆಯಿಂದಲೇ ವಿಮುಖರಾಗುವ ಎಲ್ಲ ಸಾಧ್ಯತೆಗಳು ದಟ್ಟವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net