ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಚುರುಕಿಗೆ ತಾಕೀತು

ctd ---0002
Published on

ಚಿತ್ರದುರ್ಗ: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ವಿಶ್ವೇಶ್ವರಯ್ಯ ಜಲ ನಿಗಮದ ಎಂಡಿ ಸಣ್ಣಚಿತ್ತಯ್ಯ ಅವರು ನಿಗಮದ ಅಧಿಕಾರಿಗಳು, ಗುತ್ತಿಗೆದಾರರಿಗೆ ಸೂಚಿಸಿದರು.

ಜಿಲ್ಲೆಗೆ ಗುರುವಾರ ಭೇಟಿ ನೀಡಿದ ಅವರು, ಚಿತ್ರದುರ್ಗ ತಾಲೂಕು ಗೋನೂರು ಬಳಿ ಆಕ್ವಾಡೆಕ್ ಕಾಮಗಾರಿ ಪರಿಶೀಲಿಸಿದರು. ಯಾವೆಲ್ಲ ಕಾಮಗಾರಿಗಳನ್ನು ಯಾರಿಗೆ ವಹಿಸಲಾಗಿದೆಯೋ ಆ ಎಲ್ಲ ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ಪೂರ್ಣಗೊಳಿಸಬೇಕು. ಉದಾಸೀನ ಮಾಡದೆ ನಿಗಾವಹಿಸಬೇಕು ಎಂದು ತಾಕೀತು ಮಾಡಿದರು.

ವಿವಿಧ ಕೆರೆಗಳಿಗೆ ನೀರು ತುಂಬಿಸುವ, ಜಗಳೂರು ಶಾಖಾ ಕಾಲುವೆಗೆ ಆಫ್‌ಟೇಕ್ ಕಾಮಗಾರಿಗಳೊಂದಿಗೆ ಚಿತ್ರದುರ್ಗ ಶಾಖಾ ಕಾಲುವೆಯ ಕೊನೆವರೆಗೂ ಪರಿವೀಕ್ಷಣೆ ನಡೆಸಿದರು. ಭದ್ರಾ ಮೇಲ್ದಂಡೆ ಯೋಜನೆ ಸಿಇ ಎಫ್.ಎಚ್. ಲಮಾಣಿ, ಎಇಇಗಳಾದ ಕೆ. ಸಂತೋಷ್, ಜನಾರ್ಧನಾಚಾರಿ, ಆಫ್ರೀನ್ ಮತ್ತಿತರ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net