ಭಗವಾನ್ ಮಹಾವೀರರ ಆದರ್ಶ ಸ್ಮರಣಿಯ

RemasterDirector_1a5c03258
ಪಿರಿಯಾಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಭಗವಾನ್ ಮಹಾವೀರರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ನಿಸರ್ಗಪ್ರಿಯಾ, ನಾಕೋಡ ಅಶೋಕ್ ಜೈನ್, ಭೀಕಮ್ ಚಂದ್ ಜೈನ್, ಧನ ರಾಮ್ ಜೈನ್, ಕಮಲೇಶ್ ಜೈನ್, ಲಲಿತ್ ಜೈನ್, ಅಶೋಕ್ ಜೈನ್ ಇತರರು ಇದ್ದರು.
Published on

ಪಿರಿಯಾಪಟ್ಟಣ: ಸಹಾನುಭೂತಿಯ ಧರ್ಮವನ್ನು ಜಗತ್ತಿಗೆ ಪರಿಚಯಿಸಿದ ಭಗವಾನ್ ಮಹಾವೀರರ ಆದರ್ಶ ಸ್ಮರಣಿಯವಾದುದು ಎಂದು ತಹಸೀಲ್ದಾರ್ ನಿಸರ್ಗಪ್ರಿಯಾ ತಿಳಿಸಿದರು.

ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯಿಂದ ಪಟ್ಟಣದ ತಾಲೂಕು ಕಚೇರಿಯ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಜೈನ ಧರ್ಮದ 24ನೇ ತೀಥರ್ಂಕರರಾದ ಭಗವಾನ್ ಮಹಾವೀರರು ಚಿಕ್ಕ ವಯಸ್ಸಿನಲ್ಲಿಯೇ ಸನ್ಯಾಸತ್ವ ಸ್ವೀಕರಿಸಿದವರು. ಸಹಾನುಭೂತಿಯ ಹೊಸ ಧರ್ಮವನ್ನು ಜಗತ್ತಿಗೆ ಪರಿಚಯಿಸಿ ಅಹಿಂಸೆ, ಪ್ರೀತಿಯ ಮಹತ್ವ ತಿಳಿಸಿಕೊಟ್ಟಿದ್ದಾರೆ, ಇವರ ತತ್ವ ಆದರ್ಶಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.

ಜೈನ ಸಮುದಾಯದ ಮುಖಂಡ ನಾಕೋಡ ಅಶೋಕ್ ಜೈನ್ ಮಾತನಾಡಿ, ಬಾಲ್ಯದಲ್ಲಿ ಭಗವಾನ್ ಮಹಾವೀರರ ಹೆಸರು ವರ್ಧಮಾನ್ ಎಂಬುದಾಗಿತ್ತು ಎಂದು ತಿಳಿಸಿದರು. ಮಹಾವೀರರು ಸಮೃದ್ಧ ಜೀವನ ಮತ್ತು ಶಾಂತಿಯ ಮಾರ್ಗಕ್ಕೆ ಅಹಿಂಸೆ, ಸತ್ಯ, ಅಸ್ಥಿತ್ವ, ಬ್ರಹ್ಮಚರ್ಯ ಮತ್ತು ಭೌತಿಕವಲ್ಲದ ವಸ್ತುಗಳಿಂದ ದೂರವಿರಬೇಕು ಎಂದು ಸಂದೇಶ ನೀಡಿದ್ದಾರೆ ಎಂದರು.

ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೃಷ್ಣಗೌಡ, ಉಪ ತಹಸೀಲ್ದಾರ್ ವಿನೋದ್ ಕುಮಾರ್, ಆಹಾರ ಇಲಾಖೆ ಶಿರಸ್ತೇದಾರ್ ಸಣ್ಣಸ್ವಾಮಿ, ಜೈನ ಸಮುದಾಯದ ಮುಖಂಡರಾದ ಅಶೋಕ್ ಜೈನ್, ಭೀಕಮ್ ಚಂದ್ ಜೈನ್, ಧನ ರಾಮ್ ಜೈನ್, ಕಮಲೇಶ್ ಜೈನ್, ಲಲಿತ್ ಜೈನ್, ಕಂದಾಯ ಇಲಾಖೆಯ ಲೆಕ್ಕಾಧಿಕಾರಿ ಉಮೇಶ್ ದೇವಲ್, ಸಿಬ್ಬಂದಿ ಜಯಕುಮಾರ್, ಮಾಳಗಯ್ಯ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net