ಭಕ್ತ ಸಮೂಹಕ್ಕೆ ಸೌಲಭ್ಯ ಕಲ್ಪಿಸಲು ಪ್ರಯತ್ನ - ಮಂಗಲ ಅಂಗಡಿ ಭರವಸೆ

121245
Published on

ಉಗರಗೋಳ: ಶ್ರೀಕ್ಷೇತ್ರ ಯಲ್ಲಮ್ಮ ಗುಡ್ಡಕ್ಕೆ ಸಂಸದೆ ಮಂಗಲ ಅಂಗಡಿ ಶನಿವಾರ ಭೇಟಿ ನೀಡಿ, ಆದಿಶಕ್ತಿ ಶ್ರೀರೇಣುಕಾ ಯಲ್ಲಮ್ಮ ದೇವಿಯ ದರ್ಶನ ಪಡೆದರು.
ಸುದ್ದಿಗಾರರೊಂದಿಗೆ ಮಂಗಲ ಅಂಗಡಿ ಮಾತನಾಡಿ, ರೇಣುಕಾ ಯಲ್ಲಮ್ಮ ದೇಗುಲಕ್ಕೆ ದೇಶದ ನಾನಾ ಭಾಗಗಳಿಂದ ಭಕ್ತರು ಆಗಮಿಸುತ್ತಾರೆ. ಹಾಗಾಗಿ ಪ್ರವಾಸೋದ್ಯಮ ಇಲಾಖೆ ಮೂಲಕ ಭಕ್ತರಿಗೆ ಸೌಲಭ್ಯ ಕಲ್ಪಿಸಲು ಪ್ರಯತ್ನಿಸುತ್ತೇನೆ.

ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹಾಗೂ ಸವದತ್ತಿ ಯಲ್ಲಮ್ಮ ಕ್ಷೇತ್ರದ ಶಾಸಕ ಆನಂದ ಮಾಮನಿ ಜತೆ ಚರ್ಚಿಸಿ, ಬೇಡಿಕೆ ಈಡೇರಿಸುವೆ ಎಂದರು. ಶ್ರದ್ಧಾ ಶೆಟ್ಟರ್, ಜಗದೀಶ ಕೌಜಗೇರಿ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ವೈ.ವೈ. ಕಾಳಪ್ಪನವರ, ಕೊಳ್ಳಪ್ಪಗೌಡ ಗಂದಿಗವಾಡ, ಸುನೀಲ ಸುಳ್ಳದ, ವಿರೂಪಾಕ್ಷ ಹಣಶಿ, ಸವದತ್ತಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಡಾ.ನಯನಾ ಬಸ್ಮಿ, ಶಿವನಗೌಡ ಗಡಾದಗೌಡ್ರ, ನಾಗರತ್ನಾ ಚೋಳಿನ, ರತ್ನವ್ವ ತೇಗೂರ, ಮಲ್ಲಿಕಾರ್ಜುನ ಹಾರೋಬೆಳವಡಿ, ಉಮೇಶ ದಳವಾಯಿ, ಈರಣ್ಣ ಚಂದರಗಿ, ಯಮನಪ್ಪ ಬೋವಿ, ಶರೀಫ್ ಭಾರಿಗಿಡದ, ಉಮೇಶ ಹಾದಿಮನಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net