

ಬೆಟ್ಟದಪುರ : ಬೆಟ್ಟದಪುರ ಸಮೀಪದ ಸಂಗರಶೆಟ್ಟಹಳ್ಳಿ ಗ್ರಾಮದಲ್ಲಿ ಭಾನುವಾರ ರಾತ್ರಿ ತಂಬಾಕು ಹದ ಮಾಡುವ ವೇಳೆ ಬ್ಯಾರನ್ ಗೆ ಆಕಸ್ಮಿಕ ಬೆಂಕಿ ತಗುಲಿ ತಂಬಾಕು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.
ಗ್ರಾಮದ ವೇದಾವತಿ ಎಂಬುವರಿಗೆ ಸೇರಿದ ಬ್ಯಾರನ್ ಮನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದೆ, ತಕ್ಷಣ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದಾದರೂ ಯಾವುದೇ ಪ್ರಯೋಜನವಾಗಿಲ್ಲ, ಅಷ್ಟರಲ್ಲಿ ಬೆಂಕಿಯ ತೀವ್ರತೆ ಹೆಚ್ಚಾಗಿ ತಂಬಾಕು, ಸೇರಿದಂತೆ ಪೋಲ್ಸ್, ಪೈಪ್ ಗಳು, ಕರೆಕಡ್ಡಿ ಎಲ್ಲವೂ ಸಂಪೂರ್ಣ ಸುಟ್ಟು ಹೋಗಿದೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಅಕ್ಕಪಕ್ಕ ಮನೆಗಳಿಗೆ ಹಾಗೂ ಬ್ಯಾರನ್ ಗಳಿಗೆ ತೊಂದರೆಯಾಗದಂತೆ ಬೆಂಕಿಯನ್ನು ನಂದಿಸಿದರು.