

ಕೋಲಾರ: ಕರ್ತವ್ಯ ನಿರ್ವಹಣೆಯಲ್ಲಿ ಶಿಸ್ತು, ಸಮಯಪ್ರಜ್ಞೆ ಅಗತ್ಯ. ನಿರ್ಲಕ್ಷ್ಯ ತೋರುವ ಸಿಬ್ಬಂದಿಯಿಂದ ಬ್ಯಾಂಕಿಗೆ ಆರ್ಥಿಕ ಹಿನ್ನಡೆಯಾದರೆ ಖಂಡಿತ ಸಹಿಸುವುದಿಲ್ಲ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ಬ್ಯಾಂಕ್ ನಿಮಗೆ, ನಿಮ್ಮ ಕುಟುಂಬಗಳಿಗೆ ಆಸರೆಯಾಗಿದೆ. ನಿಮ್ಮ ಬೇಡಿಕೆಗಳನ್ನು ಈಡೇರಿಸಿದೆ. ಆದರೆ ಅನ್ನ ನೀಡುವ ಸಂಸ್ಥೆಯನ್ನು ಉಳಿಸುವ ನಿಟ್ಟಿನಲ್ಲಿ ನಿಮ್ಮ ಪ್ರಯತ್ನ ನಮ್ಮ ನಿರೀಕ್ಷೆಯಂತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಬ್ಯಾಂಕ್ ಉಳಿಸಬೇಕು ಎಂಬ ಬದ್ಧತೆ ಸಿಬ್ಬಂದಿಯಲ್ಲಿ ಬರಬೇಕು. ಎಲ್ಲ ಕೆಲಸಗಳನ್ನು ಹೇಳಿಕೊಟ್ಟು ವಾಡಿಸಲು ಸಾಧ್ಯವಾಗುವುದಿಲ್ಲ. ನೀವೇ ಇದು ನಮ್ಮ ಬ್ಯಾಂಕ್, ನನಗೆ ಅನ್ನ ನೀಡುತ್ತಿರುವ ಸಂಸ್ಥೆ, ನನ್ನ ಮನೆ ದೇವರಂತೆ ಎಂದು ಭಾವಿಸಿ ಶ್ರದ್ಧೆ, ಭಕ್ತಿಯಿಂದ ಕೆಲಸ ವಾಡಬೇಕು. ಅವಿಭಜಿತ ಜಿಲ್ಲೆಯ ಎಲ್ಲ ಶಾಖೆಗಳ ಸಿಬ್ಬಂದಿ ಬೆಳಗ್ಗೆ 9.45ಕ್ಕೆ ಕರ್ತವ್ಯಕ್ಕೆ ಹಾಜರಿರಬೇಕು ಮತ್ತು ಸಂಜೆ 5.45ರವರೆಗೂ ಕೆಲಸ ವಾಡಬೇಕು. ತಪ್ಪಿದಲ್ಲಿ ಕಾನೂನು ರೀತಿಯ ಕ್ರಮ ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಸಿ ಬಳಿಯಲು ಅವಕಾಶ ಕೊಡಬೇಡಿ: ಬ್ಯಾಂಕ್ ದಿವಾಳಿಯಾಗಿದ್ದಾಗ ಯಾರೂ ಗಮನಿಸುತ್ತಿರಲಿಲ್ಲ. ಈಗ ಬ್ಯಾಂಕ್ ಸಹಕಾರಿ ರಂಗದಲ್ಲೇ ರಾಜ್ಯದ ನಂ.1 ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎಲ್ಲರ ಕಣ್ಣು ಬ್ಯಾಂಕಿನ ಕಡೆ ತಿರುಗಿದೆ. ಸಣ್ಣ-ಪುಟ್ಟ ತಪ್ಪುಗಳನ್ನು ದೊಡ್ಡದು ವಾಡಿ ಬ್ಯಾಂಕಿಗೆ ಮಸಿ ಬಳಿಯಲು ಕೆಲವರು ಕಾಯುತ್ತಿದ್ದಾರೆ. ಅದಕ್ಕೆ ಅವಕಾಶ ನೀಡಬಾರದು. ಕರ್ತವ್ಯವನ್ನು ನಿಷ್ಠೆಯಿಂದ ವಾಡಬೇಕು ಎಂದು ಸಲಹೆ ನೀಡಿದರು.
ಗಣಕೀಕರಣ ಕಾರ್ಯ ಮುಕ್ತಾಯವಾಗಿದೆ. ಗಣಕೀಕೃತ ಲೆಕ್ಕಪರಿಶೋಧನೆ ಅಂತಿಮ ಹಂತದಲ್ಲಿದೆ. ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಎಲ್ಲ ಸೊಸೈಟಿಗಳಲ್ಲೂ ಪ್ಯಾಕ್‌ಗಳ ಗಣಕೀಕೃತ ಲೆಕ್ಕಪರಿಶೋಧನೆ ನಡೆಸುವಂತಾಗಬೇಕು. ಗ್ರಾಹಕರಿಗೆ ಪ್ಯಾಕ್‌ಗಳ ಬಗ್ಗೆ ಇರುವ ಅನುವಾನಗಳು ದೂರವಾಗಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಎರಡೂ ಜಿಲ್ಲೆಗಳ ಎಲ್ಲ ಶಾಖೆಗಳ ವ್ಯವಸ್ಥಾಪಕರು, ಸಿಬ್ಬಂದಿಯಿಂದ ಆಯಾ ಶಾಖೆಯ ಪ್ರಗತಿಯ ವಾಹಿತಿ ಪಡೆದ ಅಧ್ಯಕ್ಷರು, ಉತ್ತಮವಾಗಿ ಕಾರ್ಯನಿರ್ವಹಿಸಿದ ಕೆಲವು ಶಾಖೆಗಳ ಸಿಬ್ಬಂದಿಯನ್ನು ಅಭಿನಂದಿಸಿದರು. ಉಳಿದವರು ಅದೇ ವಾದರಿಯಲ್ಲಿ ಕಾರ್ಯನಿರ್ವಹಿಸಲು ತಾಕೀತು ವಾಡಿದರು.
ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ಕೃಷ್ಣಮೂರ್ತಿ, ಎಜಿಎಂಗಳಾದ ಎಂ.ಆರ್.ಶಿವಕುವಾರ್, ಖಲೀಮುಲ್ಲಾ, ಹುಸೇನ್‌ಸಾಬ್ ದೊಡ್ಡಮುನಿ, ಬೈರೇಗೌಡ, ಅರುಣ್‌ಕುವಾರ್, ಭಾನುಪ್ರಕಾಶ್ ಇದ್ದರು.
ಸಿಬ್ಬಂದಿ ಠೇವಣಿ ಸಂಗ್ರಹದಲ್ಲಿ ನಿರೀಕ್ಷಿತ ಗುರಿ ಸಾಧಿಸುತ್ತಿಲ್ಲ. ಉಳಿತಾಯದ ಮನೋಭಾವ ಇರುವವರ ಮನವೊಲಿಸಿ, ಡಿಸಿಸಿ ಬ್ಯಾಂಕಿನಲ್ಲಿ ಹೆಚ್ಚಿನ ಬಡ್ಡಿ ನೀಡಲಾಗುತ್ತದೆ ಎಂಬುದನ್ನು ಮನಗಾಣಿಸಬೇಕು. ಪಾರದರ್ಶಕತೆ, ಗಣಕೀಕರಣದಿಂದ ಭ್ರಷ್ಟಾಚಾರಕ್ಕೆ ಅವಕಾಶವಿಲ್ಲ ಎಂಬ ಸತ್ಯವನ್ನು ಹೇಳಿ ಠೇವಣಿ ಸಂಗ್ರಹಿಸಬೇಕು. ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಕೋಲಾರ