

ನಗರದ ಚಾಮರಾಜ ಜೋಡಿ ರಸ್ತೆಯ ಮೈಸೂರು ಸಿಟಿ ಕೋ-ಹೌಸಿಂಗ್ ಸೊಸೈಟಿ ಸಮುದಾಯ ಭವನದಲ್ಲಿ ಮೇ 25 ರಂದು ಬೆಳಗ್ಗೆ 10.30ಕ್ಕೆ ಬ್ಯಾಂಕುಗಳ ತಾತ್ಕಾಲಿಕ/ಗುತ್ತಿಗೆ ಕಾರ್ಮಿಕರ ಸಮಾವೇಶ ಆಯೋಜಿಸಲಾಗಿದೆ ಎಂದು ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟದ ಅಧ್ಯಕ್ಷ ಎಂ.ರಾಮರಾವ್ ತಿಳಿಸಿದರು.
ಗ್ರಾಮೀಣ ಬ್ಯಾಂಕ್ ನೌಕರರ ಒಕ್ಕೂಟ, ಕೆನರಾ ಬ್ಯಾಂಕ್ ಸಬ್ ಸ್ಟಾಫ್ ಯೂನಿಯನ್, ಎಸ್‌ಬಿಐ ಎಂಪ್ಲಾಯೀಸ್ ಯೂನಿಯನ್, ಎಸ್‌ಬಿಐ ಟೆಂಪರರಿ ಸಬ್ ಸ್ಟಾಫ್ ಯೂನಿಯನ್ ಹಾಗೂ ಬ್ಯಾಂಕುಗಳ ಬಿಸಿ ಎಂಪ್ಲಾಯೀಸ್ ಸಹಯೋಗದಲ್ಲಿ ಸಮಾವೇಶ ನಡೆಯಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಬ್ಯಾಂಕ್‌ಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ನೌಕರರಿಗೆ ಸರಿಯಾದ ವೇತನ, ಬೋನಸ್ ನೀಡುತ್ತಿಲ್ಲ. ನೌಕರರಿಂದ ಹೆಚ್ಚಿನ ಅವಧಿ ದುಡಿಸಿಕೊಳ್ಳುತ್ತಾರೆ. ರಾಷ್ಟ್ರೀಯ ಹಬ್ಬಗಳು, ಬ್ಯಾಂಕ್ ರಜೆ, ಮತದಾನ ಮಾಡುವ ದಿನಗಳು ಮತ್ತು ಹೆರಿಗೆ ರಜೆಯ ವೇತನವನ್ನು ಎಲ್ಲ ಬ್ಯಾಂಕುಗಳಲ್ಲಿಯೂ ನೀಡುತ್ತಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಎಸ್‌ಬಿಐ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ, ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ಅಧ್ಯಕ್ಷ ರಾಜು, ಪ್ರಧಾನ ಕಾರ್ಯದರ್ಶಿ ಯೋಗಾನರಸಿಂಹ ಇತರರಿದ್ದರು.