ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿ ಬೋಳನಹಳ್ಳಿಯಲ್ಲಿ ಬೂತ್ ವಿಜಯ ಅಭಿಯಾನಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಚಾಲನೆ ನೀಡಿದರು.
ಭಾನುವಾರ ಬೋಳನಹಳ್ಳಿಯಲ್ಲಿ ಪಕ್ಷದ ಬೂತ್ ಸಮಿತಿ ಅಧ್ಯಕ್ಷರಾದ ಕುಮಾರ್, ಲೋಕೇಶ್ ಮತ್ತು ಮಂಜುನಾಥ್(ಬೂತ್ ಸಂಖ್ಯೆ 28,29 ಮತ್ತು 30) ಮನೆಯ ಆವರಣದಲ್ಲಿ ಬಿಜೆಪಿ ಬಾವುಟವನ್ನು ಹಾರಿಸಿ ಅಭಿಯಾನಕ್ಕೆ ಚಾಲನೆ ನೀಡಿದರು. ನಂತರ ಬಿಜೆಪಿ ಜಿಲ್ಲಾ ಪ್ರಧಾ ಕಾರ್ಯದರ್ಶಿ ಬಿ.ಎಸ್.ಯೋಗಾನಂದಕುಮಾರ್ ಮನೆಯ ಆವರಣದ ಮುಂಭಾಗ ವೇದಿಕೆ ಕಾರ್ಯಕ್ರಮ ಜರುಗಿತು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಪಕ್ಷದ ಮುಖಂಡರು ಗ್ರಾಮದ ಪ್ರಮುಖ ರಸ್ತೆಯಲ್ಲಿ ಪಾದಯಾತ್ರೆ ನಡೆಸಲಾಯಿತು. ಮನೆಗೆ ತೆರಳಿ ಮನೆಯ ಆವರಣದಲ್ಲಿ ಪಕ್ಷದ ಬಾವುಟ ಹಾರಿಸಲಾಯಿತು. ಮನೆಯವರ ಕುಶಲೋಪರಿ ವಿಚಾರಿಸಿ ಮೆರವಣಿಗೆ ಮೂಲಕ ಸಭೆ ನಡೆವ ಸ್ಥಳಕ್ಕೆ ಆಗಮಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ತಾಲೂಕು ಅಧ್ಯಕ್ಷ ನಾಗಣ್ಣಗೌಡ, ಪ್ರಧಾನ ಕಾರ್ಯದರ್ಶಿ ಕಾಂತರಾಜು, ನಗರಮಂಡಲ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ರಮೇಶ್‌ಕುಮಾರ್, ಸಂಚಾಲಕ ಮಂಜುನಾಥ್, ಜಿಲ್ಲಾ ಎಸ್‌ಟಿ ಮೋರ್ಚಾ ಅಧ್ಯಕ್ಷ ಅಣ್ಣಯ್ಯನಾಯ್ಕ, ಕಿರಣ್‌ಕುಮಾರ್, ನಾಗರಾಜ ಮಲ್ಲಾಡಿ, ಮಹಿಳಾ ಮೋರ್ಚಾದ ಸವಿತಾ ಚೌವ್ಹಾಣ್, ವಿ.ಎನ್.ದಾಸ್, ಕಾರ್ಯಕರ್ತರು ಹಾಜರಿದ್ದರು.