ಬೋರ್‌ವೆಲ್ ಚಾಲು ಮಾಡಲು ಹೋದ ವ್ಯಕ್ತಿ ವಿದ್ಯುತ್ ತಗುಲಿ ಸಾವು

Crime Logo
Published on

ಶಿಗ್ಗಾಂವಿ: ಮೆಕ್ಕೆಜೋಳ ಬೆಳೆಗೆ ನೀರು ಹಾಯಿಸಲು ಬೋರ್‌ವೆಲ್ ಚಾಲು ಮಾಡಲು ಹೋದ ವ್ಯಕ್ತಿ ಆಕಸ್ಮಿಕವಾಗಿ ವಿದ್ಯುತ್ ತಗುಲಿ ಮೃತಪಟ್ಟ ಘಟನೆ ತಾಲೂಕಿನ ವನಹಳ್ಳಿಯಲ್ಲಿ ಸೋಮವಾರ ಸಂಭವಿಸಿದೆ.
ಗ್ರಾಮದ ಸೋಮೇಶ್ವರ ಬಸಪ್ಪ ಮೆಳ್ಳಳ್ಳಿ (28) ಮೃತ ವ್ಯಕ್ತಿ.
ಇವರು ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೋಳ ಬೆಳೆಗೆ ನೀರು ಹಾಯಿಸಲು ಹೋದಾಗ ವಿದ್ಯುತ್ ತಗುಲಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಈ ಕುರಿತು ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net