

ಬೆಟ್ಟದಪುರ: ಬೆಟ್ಟದಪುರ ಬಿಜೆಪಿ ಮಹಾಶಕ್ತಿ ಕೇಂದ್ರದಲ್ಲಿ ವಿಜಯ ಸಂಕಲ್ಪ ಅಭಿಯಾನ ಯಾತ್ರೆಯ ಪೂರ್ವಬಾವಿ ಸಭೆ ಮಂಗಳವಾರ ನಡೆಯಿತು.
ಸಭೆಯಲ್ಲಿ ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ಮಾತನಾಡಿ, ಜನರು ತಾಲೂಕಿನಲ್ಲಿ ರೈತರ ಕೆಲಸ ಮಾಡಲು ಒಂದು ಅವಕಾಶವನ್ನು ನೀಡಬೇಕು. ಪಕ್ಷದ ಕಾರ್ಯಕರ್ತರು ಬೇರು ಮಟ್ಟದಿಂದ ಸಂಘಟನೆ ಮಾಡುವಲ್ಲಿ ನಿರತರಾಗಬೇಕು ಎಂದು ಸಲಹೆ ನೀಡಿದರು.
ತಾಲೂಕು ಬಿಜೆಪಿ ಘಟಕದ ಅಧ್ಯಕ್ಷ ಎಂ.ಎಂ.ರಾಜೇಗೌಡ ಮಾತನಾಡಿ, ಕೇಂದ್ರ ಹಾಗೂ ರಾಜ್ಯದಲ್ಲಿ ಆಡಳಿತದಲ್ಲಿ ಇರುವ ಬಿಜೆಪಿ ಸರ್ಕಾರದ ಕೊಡುಗೆಗಳ ಬಗ್ಗೆ ಜನರಿಗೆ ತಿಳಿಸಬೇಕು. ನರೇಂದ್ರ ಮೋದಿ ಅವರ ಸರ್ಕಾರ ಹಲವಾರು ಯೋಜನೆಗಳನ್ನು ಜನರಿಗೆ ತಲುಪಿಸಿದೆ. ಮುಂಬರುವ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ಖಚಿತ ಎಂದು ವಿಶ್ವಾಸವ್ಯಕ್ತಪಡಿಸಿದರು.
ವಾಟರ್ ಬೋರ್ಡ್ ಸದಸ್ಯ ಆರ್.ಟಿ.ಸತೀಶ್, ಬೆಟ್ಟದಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮೈಲಾರಿ, ಪ್ರಧಾನ ಕಾರ್ಯದರ್ಶಿ ಅರುಣ್‌ರಾಜೇ ಅರಸ್, ಮುಖಂಡರಾದ ವಿಕ್ರಮ್ ರಾಜ್, ಎಂ.ಪಿ.ರಾಜು , ಕಿರಣ್, ಜೈರಾಮೇಗೌಡ, ನಳಿನಿ, ಬೆಕ್ಕರೆ ಮಹದೇವ್ ಸುಂದರ, ಸ್ವಾಮಿಗೌಡ, ಯೋಗೇಶ್, ಮನೋಹರ್ ಇತರರಿದ್ದರು.