

ವಿಜಯವಾಣಿ ಸುದ್ದಿಜಾಲ ಚಿತ್ರದುರ್ಗ
ರಾಜ್ಯ ಸರ್ಕಾರ ರೈತ ವಿರೋಧಿ ಸ್ರುಗೀವಾಜ್ಞೆ ಜಾರಿಗೆ ಮುಂದಾಗಿದೆ ಎಂದು ಆಪಾದಿಸಿ ಹಾಗೂ ಅದನ್ನು ಕೈ ಬಿಡುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರಾಜ್ಯರೈತ ಸಂಘದ ಕಾರ‌್ಯಕರ್ತರು ನಗರದ ಹೊರವಲಯ ಎನ್.ಎಚ್.48ರಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಕೃಷಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ರೈತ ವಿರೋಧಿಯಾಗಿದ್ದು ಅದನ್ನು ಕೈ ಬಿಡಬೇಕು. ಪಂಜಾಬ್,ರಾಜಸ್ತಾನ ಸರ್ಕಾರಗಳ ಮಾದರಿ ಎಂಎಸ್‌ಪಿಗಿಂತ ಕಡಿಮೆ ಬೆಲೆಗೆ ಬೆಳೆ ಖರೀದಿಸಿದರೆ ಶಿಕ್ಷೆಯಾಗಬೇಕು. ಕೇರಳದಲ್ಲಿ 16 ತರಕಾರಿಗಳನ್ನೂ ಕಡಿಮೆ ಬೆಲೆಗೆ ಖರೀಸಿದರೆ ವರ್ತ ಕರು ತೊಂದರೆ ಎದುರಿಸಬೇಕಾಗುತ್ತದೆ. ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಇಂಥ ರೈತ ಪರ ಕಾನೂನುಗಳನ್ನು ಜಾರಿ ಗೊಳಿಸಬೇಕೆಂದು ಆಗ್ರಹಿಸಿದರು. ಉಪವಿಭಾಗಾಧಿಕಾರಿ ವಿ.ಪ್ರಸನ್ನ ಸ್ಥಳಕ್ಕೆ ತೆರಳಿ ರೈತರ ಮನವಿ ಸ್ವೀಕರಿಸಿದರು. ಮುಖಂಡ ಈಚಘಟ್ಟದ ಸಿದ್ದವೀರಪ್ಪ,ಸಂಘದ ಜಿಲ್ಲಾಧ್ಯಕ್ಷ ಚಿಕ್ಕ ಕಬ್ಬಿಗೆರೆ ನಾಗರಾಜ್,ಕಾರ‌್ಯದರ್ಶಿ ಮಲ್ಲಿಕಾರ್ಜುನ್ ಮೊದಲಾದವರು ಪ್ರತಿಭಟನೆಯಲ್ಲಿದ್ದರು.