ಬೆಳೆ ನಷ್ಟ ಪರಿಹಾರ ಕೊಡಿಸುವಂತೆ ಮನವಿ

18M.D.R.1
ಮದ್ದೂರಿನಲ್ಲಿ ಸಂಸದೆ ಸುಮಲತಾ ಅಂಬರೀಷ್ ಅವರಿಗೆ ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್ ಮನವಿ ಪತ್ರ ಸಲ್ಲಿಸಿದರು
Published on

ಮದ್ದೂರು: ಕಾಡು ಪ್ರಾಣಿಗಳಿಂದ ತೆಂಗಿನ ಗಿಡ ಮತ್ತು ಕಬ್ಬಿನ ಬೆಳೆ ನಾಶವಾಗುತ್ತಿದ್ದು, ನಷ್ಟದ ಅಂದಾಜು ಮಾಡಿ ಪರಿಹಾರ ದೊರಕಿಸಿ ಕೊಡುವ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಬೇಕು ಎಂದು ಸಂಸದೆ ಸುಮಲತಾ ಅಂಬರೀಷ್‌ಗೆ ತೆಂಗು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್ ಶುಕ್ರವಾರ ಸತ್ಯಾಗ್ರಹಸೌಧದಲ್ಲಿ ಮನವಿ ಸಲ್ಲಿಸಿದರು.

ಜಿಲ್ಲಾದ್ಯಂತ ಕಾಡು ಪ್ರಾಣಿಗಳ ಹಾವಳಿಯಿಂದ ರೈತರ ಬೆಳೆ ಹಾಳಾಗುತ್ತಿದೆ. ಈ ನಡುವೆ ಕಾಡು ಮತ್ತು ಮುಳ್ಳು ಹಂದಿಗಳು ತೆಂಗಿನ ಗಿಡಗಳ ಬುಡದ ತಿರುಳನ್ನು ತಿನ್ನುವುದಕ್ಕಾಗಿ ಇಡಿ ಗಿಡವನ್ನೇ ಬುಡಮೇಲು ಮಾಡುತ್ತಿವೆ. ಇದರ ಜತೆಗೆ ಕಬ್ಬಿನ ಬೆಳೆಯನ್ನೂ ತಿನ್ನುತ್ತಿವೆ. ಇದರಿಂದ ಕಬ್ಬಿನ ಬೆಳೆ ನಾಶವಾಗಿ ರೈತರಿಗೆ ಆರ್ಥಿಕವಾಗಿ ನಷ್ಟವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಮನವಿ ಸ್ವೀಕರಿಸಿ ಸಂಸದೆ, ಈ ಸಂಬಂಧ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ರೈತ ಮುಖಂಡರಾದ ರಮೇಶ್, ರಾಜ, ರಾಜೇಂದ್ರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net