

ಬೆಳಗಾವಿ, ಸಿಹಿ, ಗೆಣಸಿಗೆ, ಬೇಡಿಕೆ, ಕ್ವಿಂಟಾಲ್‌ಗೆ, 2, ಸಾವಿರ, ರೂ, ಗಡಿ, ತಲುಪಿದ, ದರ, ಬೆಳಗಾವಿ
ಬೆಳಗಾವಿ: ರಾಜ್ಯದ ಪಶ್ಚಿಮ ಗಡಿಯ ಬೆಳಗಾವಿ ಮಣ್ಣಿನಲ್ಲಿ ಬೆಳೆಯುವ ಸಿಹಿ ಗೆಣಸು (ಕೆಂಪು)ಗೆ ಅತ್ಯಕ ಬೇಡಿಕೆ ಬಂದಿದ್ದು, ನೂರಾರು ಲೋಡ್ ಗೆಣಸು ಉತ್ತರ ಭಾರತದ ರಾಜ್ಯಗಳಿಗೆ ಸರಬರಾಜಾಗುತ್ತಿದೆ. ಹಾಗಾಗಿ, ಬೆಳಗಾವಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮಳಿಗೆಗಳಲ್ಲಿ ಸಿಹಿಗೆಣಸಿನ ಚೀಲಗಳ ರಾಶಿಯೇ ಕಂಡುಬರುತ್ತಿದೆ.
ಹೆಚ್ಚಿದ ಬೇಡಿಕೆ: ಉತ್ತರ ಭಾರತದ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ, ಛತ್ತೀಸ್‌ಗಡ, ಪಶ್ಚಿಮಬಂಗಾಳ, ರಾಜಸ್ಥಾನ ಹಾಗೂ ದೇಶದ ಇತರ ಮಹಾನಗರಗಳಲ್ಲಿ ಅತ್ಯುತ್ಸಾಹದಿಂದ ಆಚರಿಸುವ ‘ಛತ್’ ಹಬ್ಬಕ್ಕೆ ಸಿಹಿಗೆಣಸಿನ ಆಹಾರ ಕಡ್ಡಾಯ. ಹಾಗಾಗಿ, ಬೆಳಗಾವಿ, ಖಾನಾಪುರ ತಾಲೂಕು ಹಾಗೂ ರಾಜ್ಯದ ಗಡಿಯಲ್ಲಿರುವ ಮಹಾರಾಷ್ಟ್ರದ ತಾಲೂಕುಗಳಲ್ಲಿ ಬೆಳೆಯುವ ಕೆಂಪು ಗೆಣಸಿಗೆ ಬೇಡಿಕೆ ಬಂದಿದೆ. ಇದರಿಂದಾಗಿ ಮೂರು ವರ್ಷದ ಬಳಿಕ ಕ್ವಿಂಟಾಲ್ ಗೆಣಸಿನ ದರ 2000 ರೂ. ಗಡಿ ತಲುಪಿದೆ.
4 ಸಾವಿರ ಹೆಕ್ಟೇರ್‌ನಲ್ಲಿ ಬೆಳೆ: ರಾಜ್ಯದಲ್ಲಿ ಬೆರಳೆಣಿಕೆಯಷ್ಟು ಜಿಲ್ಲೆಗಳಲ್ಲಿ ಸುಮಾರು 15,000 ಹೆಕ್ಟೇರ್ ಪ್ರದೇಶದಲ್ಲಿ ಗೆಣಸು ಬೆಳೆಯಲಾಗುತ್ತಿದೆ. ಅದರಲ್ಲಿ ಬೆಳಗಾವಿ ಮತ್ತು ಖಾನಾಪುರ ತಾಲೂಕಿನಲ್ಲಿಯೇ 4 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಗೆಣಸು ಬೆಳೆಯಲಾಗುತ್ತಿದೆ. ಅಲ್ಲದೆ, ಬೆಳಗಾವಿ ಸಗಟು ಮಾರುಕಟ್ಟೆಯಲ್ಲಿ ರಾಜ್ಯದಲ್ಲಿಯೇ ಅತಿ ಹೆಚ್ಚು ಗೆಣಸು ವಹಿವಾಟು ನಡೆಯುತ್ತದೆ. ಜತೆಗೆ ಮಹಾರಾಷ್ಟ್ರದ ಚಂದಗಡ ತಾಲೂಕಿನ ಆಸುಪಾಸಿನ ಪ್ರದೇಶಗಳ ರೈತರೂ ಗೆಣಸು ಮಾರಾಟಕ್ಕೆ ಬೆಳಗಾವಿ ಮಾರುಕಟ್ಟೆಯನ್ನೇ ಅವಲಂಬಿಸಿದ್ದಾರೆ.
ಬಹುಪಾಲು ಉತ್ತರ ಭಾರತಕ್ಕೆ: ಉತ್ತರ ಭಾರತೀಯರ ‘ಛತ್’ ಪೂಜೆಗೂ ಬೆಳಗಾವಿ ಗೆಣಸಿಗೂ ಅವಿನಾಭಾವ ಸಂಬಂಧವಿದೆ. ಹಬ್ಬಕ್ಕೆ ನೈವೇದ್ಯದ ಅಡುಗೆ ಮತ್ತು ಉಪವಾಸ ಅಂತ್ಯಗೊಳಿಸಲು ಗೆಣಸು ಬೇಕು. ಹೀಗಾಗಿ ಪ್ರತಿ ವರ್ಷ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿ ವ್ಯಾಪಾರಿಗಳೇ ಸ್ವತಃ ಬೆಳಗಾವಿ ಎಪಿಎಂಸಿಗೆ ಬಂದು ನೂರಾರು ಲೋಡ್ ಗೆಣಸು ಖರೀದಿಸಿ ತೆಗೆದುಕೊಂಡು ಹೋಗುತ್ತಿದ್ದಾರೆ. ಪ್ರಸ್ತುತ ನಾಲ್ಕೆದು ವಾರಗಳ ಅವಯಲ್ಲಿ 20,650 ಕ್ವಿಂಟಾಲ್ ಸಿಹಿಗೆಣಸು ಬೆಳಗಾವಿ ಎಪಿಎಂಸಿ ಮಾರುಕಟ್ಟೆಗೆ ಬಂದಿದೆ. ಅದರಲ್ಲಿ ಶೇ.90 ಉತ್ತರ ಭಾರತದ ರಾಜ್ಯಗಳಿಗೆ ರ‌್ತಾಗಿರುವುದು ವಿಶೇಷ.
2020 ಮತ್ತು 2021ನೇ ಸಾಲಿನ ಅವಯಲ್ಲಿ ಕೋವಿಡ್ ಕಾರಣಕ್ಕೆ ಸಿಹಿಗೆಣಸಿಗೆ ಬೇಡಿಕೆ ಬಂದಿರಲಿಲ್ಲ. ಆದರೆ, ಈ ಬಾರಿ ಉತ್ತರ ಭಾರತ ರಾಜ್ಯಗಳಿಗಳಿಂದ ಹೆಚ್ಚು ಬೇಡಿಕೆ ಬರುತ್ತಿದೆ. ಮಳೆ ಕಾರಣಕ್ಕೆ ಮಾರುಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಗೆಣಸು ಬರುತ್ತಿಲ್ಲ. ಇದೀಗ ಮಳೆ ನಿಂತ ಬಳಿಕ ಗೆಣಸು ದೊಡ್ಡ ಪ್ರಮಾಣದಲ್ಲಿ ಬರುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ ಎಂದು ಎಪಿಎಂಸಿ ಮಾರುಕಟ್ಟೆ ಅಕಾರಿಗಳು ಮತ್ತು ಗೆಣಸು ವ್ಯಾಪಾರಿಗಳು ತಿಳಿಸಿದ್ದಾರೆ.
ಪ್ರಸಕ್ತ ವರ್ಷ ಮಳೆ, ನೆರೆಹಾವಳಿ ನಡುವೆಯೂ ಗೆಣಸು ಉತ್ತಮ ಇಳುವರಿ ಬಂದಿದೆ. ಆದರೆ, ನಿರಂತರ ಮಳೆ ಸುರಿಯುತ್ತಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಮಾರುಕಟ್ಟೆಗೆ ಗೆಣಸು ಬರುತ್ತಿಲ್ಲ. ಮಾರುಕಟ್ಟೆಗೆ ಆಗಮಿಸುತ್ತಿರುವ ಬಹುಪಾಲ ಗೆಣಸು ಉತ್ತರ ಭಾರತ ರಾಜ್ಯಗಳಿಗೆ ರ‌್ತಾಗುತ್ತಿದೆ.| ಕೆ.ಎಚ್.ಗುರುಪ್ರಸಾದ ಉಪನಿರ್ದೇಶಕ (ಪ್ರಭಾರಿ) ಬೆಳಗಾವಿ ಎಪಿಎಂಸಿ ಮಾರುಕಟ್ಟೆ
|ಮಂಜುನಾಥ ಕೋಳಿಗುಡ್ಡ ಬೆಳಗಾವಿ